UP ಸಿಎಂ ಯೋಗಿ ಅತ್ಯಾಚಾರಿ ಎಂದ ಸಿಂಗರ್ ವಿರುದ್ಧ ಕೇಸ್‌

Published : Jun 21, 2019, 09:59 AM IST
UP ಸಿಎಂ ಯೋಗಿ ಅತ್ಯಾಚಾರಿ ಎಂದ  ಸಿಂಗರ್ ವಿರುದ್ಧ ಕೇಸ್‌

ಸಾರಾಂಶ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಓರ್ವ ಅತ್ಯಾಚಾರಿ ಎಂದು ಪೋಸ್ಟ್ ಹಾಕಿದ್ದ ರ‍್ಯಾಪ್‌ ಹಾಡುಗಾರ್ತಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. 

ವಾರಾಣಸಿ [ಜೂ.21]: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದ ಇಂಗ್ಲೆಂಡ್‌ ಮೂಲಕದ ರಾರ‍ಯಪರ್‌ ತರುಣ್‌ ಕೌರ್‌ ಧಿಲ್ಲೋನ್‌ ಅಲಿಯಾಸ್‌ ಹರ್ದ್ ಕೌರ್‌ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲಾಗಿದೆ.

ಯೋಗಿ ಒಬ್ಬ ‘ಅತ್ಯಾಚಾರಿ’ ಹಾಗೂ ಮುಂಬೈ ಉಗ್ರ ದಾಳಿ ವೇಳೆ ಸಾವನ್ನಪ್ಪಿದ ಹಿರಿಯ ಐಪಿಎಸ್‌ ಅಧಿಕಾರಿ ‘ಹೇಮಂತ್‌ ಕರ್ಕರೆ’ ಸಾವಿಗೆ, ಆರ್‌ಎಸ್‌ಎಸ್‌ ಮತ್ತು ಅದರ ಮುಖ್ಯಸ್ಥ ಮೋಹನ್‌ ಭಾಗವತ್‌ ಕಾರಣ ಎಂದು ಕೌರ್‌ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದರು. 

ಈ ಕುರಿತು ಸ್ಥಳೀಯ ನ್ಯಾಯವಾದಿ ಶಶಾಂಕ್‌ ಶೇಖರ್‌, ಬುಧವಾರ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ವಾರಾಣಸಿಯ ಕಂಟೋನ್ಮೆಂಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರನ್ನು ಸೈಬರ್‌ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು