
ಆತ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದರೆ ಇವತ್ತು ಕೆಲಸ ಕಳೆದುಕೊಂಡು ಖಾಲಿ ಕೈಯಲ್ಲಿ ಕೂರಬೇಕಾದ ಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಆತ ಮಾಡಿದ ಅಂಥ ಅಪರಾಧವಾದರೂ ಏನು? ಇಲ್ಲಿದೆ ಫುಲ್ ಡಿಟೇಲ್ಸ್..
ಇದು ತಮಾಷೆಯ ಸಂಗತಿಯೋ, ಅಸಹ್ಯದ ಸಂಗತಿಯೋ ಗೊತ್ತಿಲ್ಲ. ಆದರೆ ಸೆಕ್ಯೂರಿಟಿ ಗಾರ್ಡ್ ಮಾತ್ರ 6 ತಿಂಗಳು ಕೆಲಸ ಕಳೆದುಕೊಂಡಿದ್ದಾರೆ. ಪ್ಲೋರಿಡಾದ ಸೆಕ್ಯೂರಿಟಿ ಗಾರ್ಡ್ ಗೆ ಅದು ಏನು ಹುಚ್ಚೋ ಗೊತ್ತಿಲ್ಲ. ತಾನು ಮಾಡುವ ಪ್ರತಿ ಕೆಲಸವನ್ನುತನ್ನದೆ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಾ ಕೂರುತ್ತಾನೆ.
ಈತನ ಹೆಸರು ಡೌಗ್, ನ್ಯೂ ಜೆರ್ಸಿಯ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್. ತನ್ನ ವಿವಿಧ ಭಂಗಿಗಳನ್ನು, ದೇಹದದಲ್ಲಿ ಬೇಡವಾದ ಗ್ಯಾಸ್ ಹೊರಹೋಗುವಾಗ ಮುಖದ ಹಾವಭಾವಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಲು ಆರಂಭಿಸುತ್ತಾನೆ. ಇದಕ್ಕೆ ಆತನ ಸ್ನೇಹಿತರು ಭೇಷ್ ಎನ್ನುತ್ತಾರೆ. ಪೌಲ್ ಫ್ಲಾರ್ಟ್ ಎಂಬ ಪಾತ್ರವೊದನ್ನು ತನ್ನದೇ ದೃಷ್ಟಿಯಲ್ಲಿ ಚಿತ್ರಣ ಮಾಡಿ ಆ ಪಾತ್ರವೇ ತಾನಾಗುತ್ತಾನೆ. ಈತನ ಗ್ಯಾಸ್ ಕಾರ್ಯಾಚರಣೆ ಜಗಜ್ಜಾಹೀರು ಆಗುತ್ತದೆ. ಅಥವಾ ಆತನೆ ಮಾಡಿಕೊಳ್ಳುತ್ತಾನೆ. ಈ ವಿಚಿತ್ರ ನಡುವಳಿಕೆ ಆಸ್ಪತ್ರೆಗೆ ಗೊತ್ತಾದ ನಂತರ ಈತ ಆರು ತಿಂಗಳು ಕಾಲ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ