ಮತ್ತೆ ಅಯ್ಯಪ್ಪನ ಸನ್ನಿಧಾನದಲ್ಲಿ ನಿಷೇಧಾಜ್ಞೆ ಜಾರಿ

By Web DeskFirst Published Nov 3, 2018, 2:30 PM IST
Highlights

ನಿತ್ಯ ಪೂಜೆಯ ನಿಟ್ಟಿನಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಮತ್ತೊಮ್ಮೆ ಗಲಭೆ ನಡೆಯುವ ಸಾಧ್ಯತೆ ನಡೆಯಬಹುದಾದ ನಿಟ್ಟಿನಲ್ಲಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 

ಶಬರಿಮಲೆ : ಇನ್ನೆರಡು ದಿನಗಳಲ್ಲಿ ಶಬರಿಮಲೆ ದೇಗುಲವನ್ನು ಪೂಜಾ ಕಾರ್ಯಕ್ಕೆ ತೆರೆಯಲಿದ್ದು ಈ ನಿಟ್ಟಿನಲ್ಲಿ ಸೂಕ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.  ಸುಮಾರು 50 ಕಿ.ಮೀ ದೂರದವರೆಗೂ ಕೂಡ ಕಟ್ಟೆಚ್ಚರ ವಹಿಸಲಾಗುತ್ತಿದೆ. 

ನವೆಂಬರ್ 5 ರಂದು ದಿನದ ಪೂಜೆ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತಿದೆ.  ಜಿಲ್ಲಾಡಳಿತದಿಂದ ನೆಲವುಂಗಲ್, ಪಂಪಾ, ನಿಲಕ್ಕಲ್, ಸನ್ನಿದಾನಮ್ ಪ್ರದೇಶದ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ, ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಅಲ್ಲದೇ ಈ ಸ್ಥಳದಲ್ಲಿ ವಿಶೆಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. 

ಕಳೆದ ಅಕ್ಟೋಬರ್ 17ರಂದು ದೇವಾಲಯವನ್ನು ನಿತ್ಯದ ಪೂಜೆ ಹಿನ್ನೆಲೆಯಲ್ಲಿ ತೆರೆದಿದ್ದ ಸಾಕಷ್ಟು ಪ್ರಮಾಣದಲ್ಲಿ ಗಲಭೆಗಳು ನಡೆದಿದ್ದವು. ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ್ದು, ಪ್ರತಿಭಟನೆಯನ್ನು ನಡೆಸಲಾಗಿತ್ತು. 

click me!