ಸ್ಯಾಂಡಲ್'ವುಡ್‍ನಲ್ಲಿ ಮತ್ತೊಂದು ಸೀಕ್ರೆಟ್ ಮದುವೆ!: ಗುಟ್ಟಾಗಿ ಹಸೆ ಮಣೆಯೇರಿದ ಶೃತಿ ಹರಿಹರನ್, ಹುಡುಗ ಯಾರು ಗೊತ್ತಾ?

Published : Sep 05, 2017, 08:16 AM ISTUpdated : Apr 11, 2018, 12:35 PM IST
ಸ್ಯಾಂಡಲ್'ವುಡ್‍ನಲ್ಲಿ ಮತ್ತೊಂದು ಸೀಕ್ರೆಟ್ ಮದುವೆ!: ಗುಟ್ಟಾಗಿ ಹಸೆ ಮಣೆಯೇರಿದ ಶೃತಿ ಹರಿಹರನ್, ಹುಡುಗ ಯಾರು ಗೊತ್ತಾ?

ಸಾರಾಂಶ

ಸ್ಯಾಂಡಲ್​ವುಡ್​ ನಟಿ ರಮ್ಯಾ ಬಾರ್ನ, ಸಿಂಧೂಲೋಕನಾಥ್ ರಹಸ್ಯ ಮದುವೆಯಾದ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್ನ ಮತ್ತೊಬ್ಬ ಉದಯೋನ್ಮುಖ ನಟಿ ರಹಸ್ಯ ಮದುವೆ ಆಗಿದ್ದಾರೆಂಬ ವದಂತಿ ಹಬ್ಬಿದೆ. ಇದು ನಿಜಾನಾ? ಕೆಲವೊಂದು ಮೂಲಗಳು ಇದು ನಿಜ ಎನ್ನುತ್ತವೆ. ಸುವರ್ಣ ನ್ಯೂಸ್ ಬಳಿ ಇದೆ Exclusive ಮಾಹಿತಿ .

ಬೆಂಗಳೂರು(ಸೆ.05): ಆಕೆ ಲೂಸಿಯ ಸಿನಿಮಾ ಖ್ಯಾತಿಯ ನಟಿ, ಧನಂಜಯ್ ಜೊತೆ ರಾಟೆ ಸಿನಿಮಾದಲ್ಲೂ , ಪ್ರಜ್ವಲ್ ದೇವ್ರಾಜ್ ಜೊತೆ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ನಟಿಸಿದ್ದರು. ನೀನಾಸಂ ಸತೀಶ್​ ಜೊತೆ ಬ್ಯೂಟಿಫುಲ್ ಮನಸುಗಳು ಸಿನಿಮಾದಲ್ಲಿ ಅದ್ಭುತವಾಗಿ ಅಭಿನಯಿಸಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ರು. ಅವರು ಮತ್ಯಾರೂ ಅಲ್ಲ, ಶೃತಿ ಹರಿಹರನ್ ಈ ಬಗ್ಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಗೆ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ...

ಶೃತಿ ಹರಿಹರನ್ ಮದುವೆಯಾದ್ರಾ..!

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ಶೃತಿ ಹರಿಹರನ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡ್ತಿದೆ. ಇಷ್ಟಕ್ಕೂ ನಟಿ ಶೃತಿ ಹರಿಹರನ್ ಮದುವೆಯಾಗಿರೋದು ನಿಜಾನಾ ಎಂದು ಒಮ್ಮೆ ಚಿತ್ರರಂಗದ ಮೂಲಗಳನ್ನ ಕೆದಕಿದಾಗ ಸುವರ್ಣ ನ್ಯೂಸ್​ ಹಾಗೂ ಕನ್ನಡಪ್ರಭಕ್ಕೆ exclusive ಮಾಹಿತಿ ಸಿಕ್ಕಿದೆ. ನಟಿ ಶೃತಿಹರನ್ ಮೂರು ತಿಂಗಳ ಹಿಂದೆಯೇ ವಿವಾಹವಾಗಿದ್ದಾರೆ ಎನ್ನುವುದು ಖಚಿತವಾಗಿದೆ. ಈ ಮೂಲಕ  ಅವರ ಅಭಿಮಾನಿಗಳಿಗೂ ಚಿತ್ರರಂಗಕ್ಕೂ ಬಿಗ್ ಶಾಕ್ ನೀಡಿದಂತಾಗಿದೆ. ಶೃತಿ ಹರಿಹರನ್ ಈ ಸುದ್ದಿಯನ್ನ ಸಾವರ್ಜನಿಕಗೊಳಿಸದೆ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಮುಚ್ಚಿಟ್ಟಿದ್ದರು ಎನ್ನುತ್ತವೆ ಮೂಲಗಳು.

ಶೃತಿ ಹರಿಹರನ್ ಮದುವೆಯಾಗಿರೋದು ಯಾರನ್ನು ಎನ್ನುವುದೇ ಈಗಿರೋ ಪ್ರಶ್ನೆ. ಶೃತಿ ಹರಿಹರನ್  ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನನ್ನೆ ವಿವಾಹವಾಗಿದ್ದಾರೆ ಎನ್ನುವುದು ಅಷ್ಟೆ ಸತ್ಯ. ಶೃತಿ ತನ್ನ ದೀರ್ಘಕಾಲದ ಗೆಳೆಯನನ್ನ ಅಧಿಕೃತವಾಗಿ ಮೂರೂವರೆ ತಿಂಗಳ ಹಿಂದೆಯೇ ವಿವಾಹವಾಗಿದ್ದಾರೆ.

ಶೃತಿ ಮದುವೆಯಾದ ಹುಡುಗ ಯಾರು ಗೊತ್ತಾ?

ಬ್ಯೂಟಿಫುಲ್ ಮನಸಿನ ಬೆಡಗಿ ಶೃತಿ ಹರಿಹರನ್ ವಿವಾಹವಾಗಿರುವ ಹುಡುಗನ ಹೆಸರು ರಾಮ್​. ಡಾನ್ಸ್ ಮಾಸ್ಟರ್. ಶೃತಿ ಮೂಲತಃ ಮಲಯಾಳಿ ಮೂಲದವರು. ಹುಡುಗ ರಾಮ್​ ಕೂಡ ಕೇರಳ ಹಿನ್ನೆಲೆ ಉಳ್ಳವರು. ಅಲ್ಲದೆ ಶೃತಿಹರಿಹರನ್ ಹಿನ್ನೆಲೆ ನೋಡಿದಾಗ ಅವರೂ ನೃತ್ಯದ ಬ್ಯಾಗ್ರೌಂಡನ್ನು ಹೊಂದಿದವರೇ ಆಗಿದ್ದಾರೆ. ಬಹಳ ಹಳೆಯ ಗೆಳೆಯರು ವಿವಾಹವಾಗಿದ್ದಾರೆ. ಆದರೆ ಸೈಲೆಂಟಾಗಿ ವಿವಾಹವಾದ್ದೇಕೆ ಅನ್ನೋದೆ ಎಲ್ಲರ ಪ್ರಶ್ನೆ.

ಇದು ಯಾವುದೆ ಕಾರಣಕ್ಕೂ ಕದ್ದು ಮುಚ್ಚಿ ಮದುವೆಯಾಗಿರೋದು ಅಲ್ಲವಂತೆ. ಹ್ಯಾಪಿ ನ್ಯೂ ಇಯರ್ ಸಿನಿಮಾ ನಂತರ ಶೃತಿ ಹರಿಹರನ್ ಮದುವೆಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಕೆರಿಯಯರ್ ದೃಷ್ಟಿಯಿಂದ ಹೀಗೆ ಮದುವೆಯನ್ನ ಸಾರ್ವಜನಿಕಗೊಳಿಸಿಲ್ಲ ಎನ್ನುತ್ತಾರೆ ಅವರ ಆತ್ಮೀಯರು. ಒಟ್ಟಾರೆ ನಟಿ ರಮ್ಯಾ ಬಾರ್ನಾ, ಸಿಂಧೂ ಲೋಕನಾಥ್ ನಂತರ ನಟಿ ಶೃತಿಹರನ್ ಸಹ ಮದುವೆಯಾಗಿ ಸಾರ್ವಜನಿಕವಾಗಿ ಬಹಿರಂಗಗೊಳಿಸದೆ ಇದ್ದದ್ದು ಚರ್ಚೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್