
ಬೆಂಗಳೂರು(ಅ.07): ಈ ಗೇಮ್ ಡೆಡ್ಲಿ ಬ್ಲೂ ವೇಲ್ ಗೇಮ್'ಗಿಂತಲೂ ಭಯಾನಕ. ಇದರ ಚಟಕ್ಕೆ ಬಿದ್ದರೆ ಮಕ್ಕಳ ಬದುಕು ಬರ್ಬಾದ್ ಗ್ಯಾರಂಟಿ. ಕರುನಾಡಿನ ಮಕ್ಕಳ ತಲೆ ಕೆಡಿಸುತ್ತಿರೋ ಈ ಕಿಲ್ಲಿಂಗ್ ಗೇಮ್'ನ ಚೇಸ್ ಮಾಡಿದ ನಮ್ಮ ಕವರ್ಸ್ಟೋರಿ ತಂಡ ಭಯಾನಕ ಸೀಕ್ರೆಟ್'ಗಳನ್ನ ಬಯಲು ಮಾಡಿದೆ. ಆ ಸೀಕ್ರೆಟ್ಗಳೇನು ನೋಡೋಣ ಈ ವರದಿಯಲ್ಲಿ.
ಒಂದು ಸೆಕೆಂಡ್ ಯಾಮಾರಿದ್ರೂ ಸಾಕು, ಯಮ ಲೋಕ ಸೇರೋದು ಗ್ಯಾರಂಟಿ. ಅಷ್ಟೊಂದು ಡೇಂಜರಸ್ ಆಗಿರೋ ಈ ಡೆಡ್ಲಿ ಗೇಮ್'ನ ಹೆಸರೇನು ಗೊತ್ತಾ? ವ್ಹೀಲಿಂಗ್. ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ, ಈ ಕಿಲ್ಲಿಂಗ್ ಗೇಮ್ ನಮ್ಮ ಕರುನಾಡಿಗೆ ಈಗಾಗ್ಲೇ ಕಾಲಿಟ್ಟಾಗಿದೆ. ಅಪಾಯಕಾರಿ ರೂಪದಲ್ಲಿ ಹರಡಿಯಾಗಿದೆ. ಇನ್ನೂ ಆತಂಕಕಾರಿ ವಿಚಾರ ಅಂದ್ರೆ ಈ ವ್ಹೀಲಿಂಗ್ ಅನ್ನೋ ಡೆತ್ ರೇಸ್ ಈಗಾಗ್ಲೇ ಬೆಂಗಳೂರಿನ ನೂರಾರು ಹುಡುಗರನ್ನ ಬಲಿ ಪಡೆದಿದೆ.
ಇಂಥಾ ಅಪಾಯಕಾರಿ ಆಟದ ಒಳ ಗುಟ್ಟನ್ನ ತಿಳಿದುಕೊಳ್ಳಲು ಕವರ್ಸ್ಟೋರಿ ತಂಡ ರಾಜಧಾನಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿತು. ಬೈಕ್'ಗಳಲ್ಲಿ ಎಳೆ ಹುಡುಗರು ಮಾಡುತ್ತಿದ್ದ ಹುಚ್ಚಾಟವನ್ನ ಲೈವಾಗಿ ರೆಕಾರ್ಡ್ ಮಾಡಿದೆ.
ಈ ರೀತಿ ಜೀವದ ಹಂಗು ತೊರೆದು, ಕಾನೂನಿನ ಭಯ ಇಲ್ಲದೆ ವ್ಹೀಲಿಂಗ್ ಅನ್ನೋ ಕಿಲ್ಲಿಂಗ್ ಗೇಮ್ ಆಡಲು ಕಾರಣ ಏನು ಅಂತ ತಿಳಿಯಲು ನಾವು ನಮ್ಮ ತನಿಖೆ ಮುಂದುವೆರೆಸಿದಾಗ ಆಗ ಈ ಜೋಶ್ ಹಿಂದೆ ಡ್ಸಗ್ಸ್ ಪ್ರಭಾವ ಇದೆ ಎನ್ನುವುದು ಗೊತ್ತಾಯ್ತು.
ಈ ಡೆಡ್ಲಿ ಗೇಮ್ ಹುಡುಗರನ್ನು ಕಳ್ಳತನಕ್ಕೂ ಪ್ರಚೋದಿಸುತ್ತಿದೆ. ಎಳೆ ಹುಡುಗರ ಪ್ರಾಣಕ್ಕೆ ಕಂಟಕವಾಗಿರೋ ಈ ವ್ಹೀಲಿಂಗ್ ಪ್ರತಿ ವೀಕೆಂಡ್ನಲ್ಲಿ ಬೆಂಗಳೂರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದರೂ ನಮ್ಮ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಯಾಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.