ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ಗೋಲ್ ಮಾಲ್

Published : Apr 11, 2017, 04:46 AM ISTUpdated : Apr 11, 2018, 12:43 PM IST
ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಂಘದಲ್ಲಿ  ಗೋಲ್ ಮಾಲ್

ಸಾರಾಂಶ

ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನ ಭಾಗ್ಯ ಕರುಣಿಸಿದ್ದ ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆದಿರುವುದು ಸಾಬೀತಾಗಿದೆ. ಈ ಸಂಘದಲ್ಲಿ ನಡೆದಿರುವ ಹತ್ತಾರು ಅಕ್ರಮಗಳ ಕುರಿತು ವಿಚಾರಣೆ ವರದಿ ಸಲ್ಲಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು, ಈ ಸಂಬಂಧ ಸಂಘದ ಅಧ್ಯಕ್ಷರು ಸೇರಿ ಒಟ್ಟು 9 ಮಂದಿಯನ್ನು ಸಂಘದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

ಬೆಂಗಳೂರು(ಎ.11): ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನ ಭಾಗ್ಯ ಕರುಣಿಸಿದ್ದ ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆದಿರುವುದು ಸಾಬೀತಾಗಿದೆ. ಈ ಸಂಘದಲ್ಲಿ ನಡೆದಿರುವ ಹತ್ತಾರು ಅಕ್ರಮಗಳ ಕುರಿತು ವಿಚಾರಣೆ ವರದಿ ಸಲ್ಲಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು, ಈ ಸಂಬಂಧ ಸಂಘದ ಅಧ್ಯಕ್ಷರು ಸೇರಿ ಒಟ್ಟು 9 ಮಂದಿಯನ್ನು ಸಂಘದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನಗಳನ್ನು ನೀಡಿ ವಿವಾದಕ್ಕೆಡೆಯಾಗಿದ್ದ ಈ ಸಂಘದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಅವ್ಯವಹಾರ ನಡೆದಿರುವುದನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು ಪತ್ತೆ ಹಚ್ಚಿದ್ದಾರೆ.

ಅಕ್ರಮ ಪತ್ತೆ!  

ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಗಸ್ತಿ ಕೆಂಪನಹಳ್ಳಿ, ಕೋಗಿಲು ಮತ್ತು ಅಗ್ರಹಾರಗಳಲ್ಲಿ ಬಡಾವಣೆ ನಿರ್ಮಿಸಲು ಉದ್ದೇಶಿಸಿತ್ತು. ಜಯಸೂರ್ಯ ಡೆವಲಪರ್ಸ್​ ಜತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಈ ಸಂಘ, ಬ್ಯಾಂಕ್​ ಗ್ಯಾರಂಟಿ ಇಲ್ಲದೆಯೇ ಡೆವಲಪರ್ಸ್​'ಗೆ 52 ಕೋಟಿ 94 ಲಕ್ಷ ರೂ.ಗಳನ್ನು ಅಡ್ವಾನ್ಸ್​ ರೂಪದಲ್ಲಿ ನೀಡಿರುವುದು ಪತ್ತೆಯಾಗಿದೆ. ಅಲ್ಲದೇ, ಯಾವುದೇ ರೀತಿಯಲ್ಲೂ ಕರಾರನ್ನೂ ಮಾಡಿಕೊಂಡಿಲ್ಲ.

ಅರ್ಹರಿಗೆ ನಿವೇಶನ ಹಂಚಿಕೆಯಲ್ಲಿ ವಿಫಲ: ಸಹ ಸದಸ್ಯರಿಗೇ ಹೆಚ್ಚುವರಿ ನಿವೇಶನ ಭಾಗ್ಯ

ಈ ಸಂಘದಲ್ಲಿ ಸಹ ಸದಸ್ಯರಾಗಿದ್ದ ಸ್ಪೀಕರ್​ ಕೋಳಿವಾಡ ಅವರ ಪುತ್ರಿಯರಿಗೆ ಒಂದೇ ದಿನದಲ್ಲಿ ನಿವೇಶನಗಳನ್ನು ರಿಜಿಸ್ಟ್ರೇಷನ್​ ಮಾಡಿಸಿದ್ದ ಈ ಸೊಸೈಟಿ, ಮೂಲ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿರಲಿಲ್ಲ. ಅಷ್ಟೇ ಅಲ್ಲ, ಸೀನಿಯಾರಿಟಿಯನ್ನು ಪಾಲಿಸಿರಲಿಲ್ಲ.

ಅನುಮೋದನೆ ಇಲ್ಲದೆ ಸಿ.ಎ.ನಿವೇಶನ ಮಾರಾಟ

ಈ ಸಂಘ 2004ನೇ ಸಾಲಿನಲ್ಲಿ ಲಗ್ಗೆರೆ ಬಡಾವಣೆಯಲ್ಲಿ ಸಿ.ಎ.ನಿವೇಶನಗಳನ್ನು ರಚಿಸಿತ್ತು. ಈ ಸಿ.ಎ.ನಿವೇಶನಗಳನ್ನು ಯಾವ್ದೇ ಕಾರಣಕ್ಕೂ ಮಾರಾಟ ಆಗ್ಲಿ. ಗುತ್ತಿಗೆ ಕೊಡೋದಾಗ್ಲಿ ಮಾಡ್ಲಿಕ್ಕೆ ಅವಕಾಶಗಳೇ ಇಲ್ಲ. ಆದರೂ ಸಹಕಾರ ಸಂಘಗಳ ರಿಜಿಸ್ಟ್ರಾರ್​ ಅವರ ಅನುಮೋದನೆ ಇಲ್ದೆ  ಸಿ.ಎ.ನಿವೇಶನವನ್ನು ಮಾರಾಟ ಮಾಡಿರೋದು ತನಿಖೆಯಿಂದ ಪತ್ತೆಯಾಗಿದೆ.

ನಿವೇಶನಕ್ಕೆ ಠೇವಣಿ ಪಡೆಯಲಿಲ್ಲ: ಒಬ್ಬೊಬ್ಬರಿಗೆ ಒಂದೊಂದು ರೇಟು

ಗಸ್ತಿ ಕೆಂಪನಹಳ್ಳಿ ಮತ್ತು ಅಗ್ರಹಾರದ ವಿವಿಧ ಹಂತಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ಡೆವಲಪರ್ಸ್​ ಜತೆ ಈ ಸಂಘ ಒಪ್ಪಂದ ಮಾಡ್ಕೊಂಡಿತ್ತು. ಆದ್ರೆ, ಕರಾರಿನ ಪ್ರಕಾರ ನಿವೇಶನ ಠೇವಣಿಗಳನ್ನೇ ಪಡ್ಕೊಂಡಿರಲಿಲ್ಲ. ಅಲ್ಲದೆ, ನಿವೇಶನದ ಠೇವಣಿ ಹಣವನ್ನು ಹೆಚ್ಚಿದ್ದು ಒಬ್ಬೊಬ್ಬ ಸದಸ್ಯರಿಗೆ ಒಂದೊಂದ್​ ರೇಟ್​'ನ್ನು ಫಿಕ್ಸ್​ ಮಾಡಿ, ಸಂಘಕ್ಕೆ ನಷ್ಟ ಮಾಡಿದೆ.

ಖರೀದಿಯಾಗಿದ್ದು 16 ಎಕರೆ

ಜಯಸೂರ್ಯ ಡೆವಲಪರ್ಸ್​ ಸಂಘದ ಪರವಾಗಿ ಒಟ್ಟು 16 ಎಕರೆಯನ್ನು ಯಲಹಂಕದಲ್ಲಿ ಖರೀದಿ ಮಾಡಿತ್ತು. ಆದ್ರೆ ಇದುವರೆಗೂ ಖರೀದಿಯಾಗಿರುವ ಜಮೀನಿನಲ್ಲಿ ಬಡಾವಣೆ ರಚನೆ ಸಂಬಂಧ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೂ ಡೆವಲಪರ್ಸ್​ ವಿರುದ್ಧ ಸಂಘದ ಆಡಳಿತ ಮಂಡಳಿ ಒಂದೇ ಒಂದು ಕ್ರಮ ಜರುಗಿಸಿಲ್ಲ  ಅಂತ ವಿಚಾರಣಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!