ಗಂಡನ ಸಾವಿಗೆ ಸೇಡುತೀರಿಸಿಕೊಳ್ಳಲು ಪ್ರಧಾನಿ ಮೋದಿಯನ್ನ ಕೋರ್ಟ್‌ಗೆ ಎಳೆದ ಪತ್ನಿ

By Web Desk  |  First Published Nov 13, 2018, 7:04 PM IST

2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಕ್ಲೀನ್ ಚೀಟ್ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ಸಂಕಷ್ಟ ಎದುರಾಗಿದೆ.


ನವದೆಹಲಿ, [ನ.13]: 2002ರ ಗುಜರಾತ್​ ಕೋಮು ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ಸಂಕಷ್ಟ ಎದುರಾಗಿದೆ. 

ಮೋದಿಗೆ ವಿಶೇಷ ತನಿಖಾ ದಳ ನೀಡಿರುವ ಕ್ಲೀನ್​ ಚಿಟ್​​ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನವೆಂಬರ್ 19ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್​ ಮಂಗಳವಾರ ತಿಳಿಸಿದೆ.

Tap to resize

Latest Videos

undefined

ಗುಜರಾತ್​ ಕೋಮು ಗಲಭೆಯ ಭಾಗವಾಗಿದ್ದ ಗುಲ್ಬರ್ಗ್​ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್​ನ ಮಾಜಿ ಸಂಸದ ಇಶಾನ್​ ಜೆಫ್ರಿ ಅವರೂ ಸೇರಿದಂತೆ ಒಟ್ಟು 69 ಮಂದಿ ಮೃತಪಟ್ಟಿದ್ದರು. 

2002ರ ಫೆ.28ರಂದು ನಡೆದ ಈ ಹತ್ಯಾಕಾಂಡದ ಹಿಂದೆ ಅಂದಿನ ಗುಜರಾತ್​ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂಚು ಅಡಗಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ದಳ (ಎಸ್​ಐಟಿ) ನರೇಂದ್ರ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಮೃತ ಇಶಾನ್​ ಜೆಫ್ರಿ ಪತ್ನಿ ಜಾಕಿಯಾ ಜೆಫ್ರಿ ಅಹಮದಾಬಾದ್​ ಹೈಕೋರ್ಟ್​ಗೆ ಮೊರೆ ಹೋಗಿದ್ದರು. 

ಆದರೆ, ಹೈಕೋರ್ಟ್​ ಎಸ್​ಐಟಿಯ ವರದಿಯನ್ನು ಎತ್ತಿಹಿಡಿದಿತ್ತು. ಇಷ್ಟಕ್ಕೆ ಸಮ್ಮತಿಸಿದೆ ಹೋರಾಟ ಮುಂದವರಿಸಿರುವ ಜಾಕಿಯಾ ಜೆಫ್ರಿ ಅವರು, ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

ಅದರಂತೆ ಜೆಫ್ರಿ ಅವರ ಅರ್ಜಿಯನ್ನು ಮಾನ್ಯ ಮಾಡಿರುವ ಸುಪ್ರೀಂ ಕೋರ್ಟ್​ ನ. 19ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

click me!