ರಾಜ್ಯವಾರು ಎಸ್​ಸಿ/ಎಸ್​ಟಿ ಮೀಸಲಾತಿ: ಸುಪ್ರೀಂ ಹೇಳಿದ್ದಿಷ್ಟು!

By Web DeskFirst Published Aug 30, 2018, 5:49 PM IST
Highlights

ಎಸ್​ಸಿ/ಎಸ್​ಟಿ ಮೀಸಲಾತಿ ಕುರಿತು ಸುಪ್ರೀಂ ಮಹತ್ವದ ತೀರ್ಪು! ಒಂದು ರಾಜ್ಯದ ಎಸ್​ಸಿ/ಎಸ್​ಟಿ ಸದಸ್ಯರು ಬೇರೊಂದು ರಾಜ್ಯದಲ್ಲಿ ಮೀಸಲಾತಿಗೆ ಅರ್ಹರಲ್ಲ! ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಸಾಧ್ಯವಿಲ್ಲ ಎಂದ ಸುಪ್ರೀಂ  
 

ನವದೆಹಲಿ(ಆ.30): ಒಂದು ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ಎಸ್​ಸಿ/ಎಸ್​ಟಿ)ದ ಸದಸ್ಯರು ಮತ್ತೊಂದು ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮತ್ತೊಂದು ರಾಜ್ಯಕ್ಕೆ ವಲಸೆಹೋದ ಎಸ್​ಸಿ/ಎಸ್​ಟಿ ಸದಸ್ಯರು ಆ ರಾಜ್ಯದಲ್ಲಿ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಸಂವಿಧಾನಿಕ ಪೀಠ ಸ್ಪಷ್ಟಪಡಿಸಿದೆ.

ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಸೂಚಿಸಿದ ವ್ಯಕ್ತಿ ಮತ್ತೊಂದು ರಾಜ್ಯದಲ್ಲಿಯೂ ತಾನು ಪರಿಶಿಷ್ಟ ಜಾತಿಯ ವ್ಯಕ್ತಿ ಎಂಬ ಆಧಾರದ ಮೇಲೆ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇತರೆ ರಾಜ್ಯಗಳ ಎಸ್​ಸಿ/ಎಸ್​ಟಿ ಸದಸ್ಯರು ದೆಹಲಿಯ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯುವ ಕುರಿತು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಈ ಮಹತ್ವದ ತೀರ್ಪು ನೀಡಿದೆ.

click me!