ಸುಳ್ಳು ಅಫಿಡಾವಿಟ್: ಬೇಷರತ್ ಕ್ಷಮೆ ಯಾಚಿಸಲು ಠಾಕೂರ್’ಗೆ ಸುಪ್ರೀಂ ತಾಕೀತು

By Suvarna Web DeskFirst Published Jul 7, 2017, 5:56 PM IST
Highlights

ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಬೇಷರತ್ ಕ್ಷಮೆಯಾಚಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ನವದೆಹಲಿ (ಜು.07): ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಬೇಷರತ್ ಕ್ಷಮೆಯಾಚಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ  ಸುಳ್ಳು ಅಫಡಾವಿಟ್ ಸಲ್ಲಿಸದಕ್ಕೆ ಅನುರಾಗ್ ಠಾಕೂರ್ ಬೇಷರತ್ ಕ್ಷಮೆ ಯಾಚಿಸಬೇಕೆಂದು ನ್ಯಾ.ಎ.ಎಂ. ಖಾನ್’ವಿಲ್ಕರ್ ಹಾಗೂ ನ್ಯಾ. ಡಿ.ವೈ. ಚಂದ್ರಚೂಡ್’ರನ್ನೊಳಗೊಂಡ  ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.

Latest Videos

ಠಾಕೂರ್ ಸುಳ್ಳು ಅಫಿಡಾವಿಟ್ ಸಲ್ಲಿಸದ್ದಾರೆಂದು ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯನ್ ಕೋರ್ಟ್ ಗಮನಕ್ಕೆ ತಂದಿದ್ದರು.

ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ವಿಫಲರಾದ ಹಿನ್ನೆಲೆಯಲ್ಲಿ ಬಿಸಿಸಿಐ ಆಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವಂತೆ ಕೋರ್ಟ್ ಅನುರಾಗ್ ಠಾಕೂರ್’ಗೆ ಸೂಚಿಸಿತ್ತು.

click me!