ಪ್ರಜ್ವಲ್ ವಿರುದ್ಧ ಶಿಸ್ತು'ಕ್ರಮಕ್ಕೆ ಮುಂದಾದ ಗೌಡರು : ಹಾಸನ ಟಿಕೆಟ್ ಬಗ್ಗೆ ಮಾಜಿ ಪ್ರಧಾನಿ ಸುಳಿವು

Published : Jul 07, 2017, 05:30 PM ISTUpdated : Apr 11, 2018, 12:56 PM IST
ಪ್ರಜ್ವಲ್ ವಿರುದ್ಧ ಶಿಸ್ತು'ಕ್ರಮಕ್ಕೆ ಮುಂದಾದ ಗೌಡರು : ಹಾಸನ ಟಿಕೆಟ್ ಬಗ್ಗೆ ಮಾಜಿ ಪ್ರಧಾನಿ ಸುಳಿವು

ಸಾರಾಂಶ

ಇಂತಹ ಹೇಳಿಕೆಗಳನ್ನು ನೀಡಿದರೆ ಟಿಕೆಟ್​ ಸಿಗುತ್ತಾ? ಪ್ರಜ್ವಲ್​ ಹಿಂದೆ ಮುಂದೆ ಓಡಾಡಿಕೊಂಡಿರುವವರು ಸರಿ ಇಲ್ಲ. ಅವರಿಗೆ ಬೇರೆ ಉದ್ದೇಶ ಇದ್ದಂತೆ ಇದೆ.ನಮ್ಮ ಕುಟುಂಬದಿಂದ ಭವಾನಿ, ಅನಿತಾ ರಾಜಕೀಯಕ್ಕೆ ಇಳಿದಿದ್ದಾರೆ. ನಮ್ಮ ಕುಟುಂಬದ ಉಳಿದ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರಲ್ಲ.

ಬೆಂಗಳೂರು(ಜು.07): ಪಕ್ಷದ ಬಗ್ಗೆ ಭಿನ್ನಾಭಿಪ್ರಯ ವ್ಯಕ್ತಪಡಿಸಿದ ಹೆಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ವರಿಷ್ಠರಾದ ದೇವೇಗೌಡರು ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣ್ಣ ಈಗಾಗಲೇ ಪ್ರಜ್ವಲ್ ಬಗ್ಗೆ ಮಾತನಾಡಿ, ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ.ಹುಣಸೂರು ಸ್ಪರ್ಧೆ ಬಗ್ಗೆ ಪ್ರಜ್ವಲ್​ ಹೇಳಿಕೆ ವಿವಾದವಾಗಿದೆ. ಆವೇಶದ ಮಾತುಗಳು ಅವನ ಮುಂದಿನ ನಡೆಗೆ ತೊಂದರೆಯಾಗುತ್ತದೆ.ಟಿಕೆಟ್​ ವಿಚಾರವಾಗಿ ಅಂತಿಮ ತೀರ್ಮಾನ ನನ್ನದೇ.ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಮತವಿಲ್ಲ. ಕುಟುಂಬದಿಂದ ಪಕ್ಷ ಹೊಡೆಯಲು ಬಿಡಲ್ಲ.ಪ್ರಜ್ವಲ್'​ಗೆ ರಾಜಕೀಯದಲ್ಲಿ ಬೆಳೆಯುವ ಆಸೆಯಿದೆ. ಹೀಗೆ ಮಾತನಾಡುತ್ತಿದ್ದರೆ ಅವನ ಭವಿಷ್ಯಕ್ಕೆ ತೊಂದರೆಯಾಗುತ್ತದೆ' ಎಂದು ಮೊಮ್ಮಗನ ಹೇಳಿಕೆಯ ಬಗ್ಗೆ ಎಚ್ಚರಿಕೆ ನೀಡಿದರು.

ಇಂತಹ ಹೇಳಿಕೆಗಳನ್ನು ನೀಡಿದರೆ ಟಿಕೆಟ್​ ಸಿಗುತ್ತಾ? ಪ್ರಜ್ವಲ್​ ಹಿಂದೆ ಮುಂದೆ ಓಡಾಡಿಕೊಂಡಿರುವವರು ಸರಿ ಇಲ್ಲ. ಅವರಿಗೆ ಬೇರೆ ಉದ್ದೇಶ ಇದ್ದಂತೆ ಇದೆ.ನಮ್ಮ ಕುಟುಂಬದಿಂದ ಭವಾನಿ, ಅನಿತಾ ರಾಜಕೀಯಕ್ಕೆ ಇಳಿದಿದ್ದಾರೆ. ನಮ್ಮ ಕುಟುಂಬದ ಉಳಿದ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರಲ್ಲ. ಪ್ರಜ್ವಲ್​ ಹೇಳಿದ ಸೂಟ್​ಕೇಸ್​ ಮಾತು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಶಿಸ್ತು ಇಲ್ಲ ಅಂದ್ರೆ ಮಗ ಆದರೇನು? ಮೊಮ್ಮಗ ಆದರೇನು? ಶಿಸ್ತು ಕ್ರಮ ಕೈಗೊಳ್ಳಲು ನಾನು ಹಿಂದೆ ಮುಂದೆ ನೋಡಲ್ಲ. ನನ್ನ ಜೀವನದಲ್ಲಿ ಸೂಟ್​ಕೇಸ್​ ರಾಜಕಾರಣ ಮಾಡಿಲ್ಲ. ಪ್ರಜ್ವಲ್​ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡುತ್ತೇನೆ. ಪ್ರಜ್ವಲ್​ ಮಾತು ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ.ಪಕ್ಷದಲ್ಲಿ ಶಿಸ್ತು ಮುಖ್ಯ. ಆವೇಶದಲ್ಲಿ ಮಾತನಾಡಿದರೇ ಏನೂ ನಡೆಯಲ್ಲ. ಇಂತಹದ್ದನ್ನೆಲ್ಲಾ ನಾನು ತುಂಬಾ ನೋಡಿ ಬಿಟ್ಟಿದ್ದೇನೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

4 ಜನದಿಂದ ದಾರಿ ತಪ್ಪುತ್ತಿದ್ದಾನೆ

ಪಕ್ಷದ ವರಿಷ್ಠನಾಗಿ ಕ್ರಮ ಕೈಗೊಳ್ಳದಿದ್ದರೆ ತಪ್ಪಾಗುತ್ತೆ. ಪ್ರಜ್ವಲ್​ಗೆ ಮೊದಲು ಬೇಲೂರಿನಿಂದ ಸ್ಪರ್ಧಿಸಲು ಇಷ್ಟವಿತ್ತು. ಆಗಲ್ಲವೆಂದಿದಕ್ಕೆ ಹುಣಸೂರಿಗೆ ಹೋಗಿದ್ದಾನೆ.ಶಿಸ್ತು ಕ್ರಮ ಏನು ಅಂತ ಕಾದು ನೋಡಿ. ಕಾರ್ಯಕರ್ತರು ಹೇಳಿದ ಕೂಡಲೇ ಸ್ಪರ್ಧೆ ಮಾಡಲು ಆಗುತ್ತಾ? ಯಾವುದೋ ಕೆಟ್ಟಗಳಿಗೆ ಅಷ್ಟೇ, ಪ್ರಜ್ವಲ್​ ಜೊತೆ ಇರುವ 3-4 ಜನ ಅವನ ದಾರಿ ತಪ್ಪಿಸುತ್ತಿದ್ದಾರೆ. ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಶಕ್ತಿ ಇಲ್ಲ. ಅಲ್ಲಿ ಯಾರು ಇಲ್ಲ ಅನ್ನೋ ಕೊರತೆ ಕಾಡ್ತಿದೆ, ಯಾರೂ ಕೂಡ ಇಲ್ಲ. ಪರೋಕ್ಷವಾಗಿ ಪ್ರಜ್ವಲ್​ಗೆ ಹಾಸನ್​ ಎಂಪಿ ಟಿಕೆಟ್​ ಸಾಧ್ಯತೆಯ ಸುಳಿವು ನೀಡಿದರು.

ರಾಜಕೀಯ ಅಂದ್ರೆ ಮಕ್ಕಳಾಟವಲ್ಲ. ಒಂದು ಕ್ಷೇತ್ರ ಆಯ್ಕೆ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಿದೆ. ಕೇಳಿದವರಿಗೆಲ್ಲ ಕೇಳಿದ ಕಡೆ ಟಿಕೆಟ್​ ಕೊಡಲು ಆಗುತ್ತಾ? ಪಕ್ಷ ಉಳಿಸೋದು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಉದ್ದೇಶ' ಎಂದು ತಮ್ಮ ಮುಂದಿನ ನಡೆಯನ್ನು ಬಿಚ್ಚಿಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
ಪಶ್ಚಿಮ ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ