ಲೋಕಪಾಲ್ ನೇಮಕ: ತೀರ್ಪು ಕಾಯ್ದಿರಿಸಿದ ಸುಪ್ರೀಂ

By Suvarna Web DeskFirst Published Mar 28, 2017, 9:38 AM IST
Highlights

ಲೋಕಪಾಲ ಕಾಯ್ದೆಯಲ್ಲಿ 'ವಿಪಕ್ಷ ನಾಯಕ'ನ ವ್ಯಾಖ್ಯಾನಕ್ಕೆ ತಿದ್ದುಪಡಿ ಸಂಸತ್ತಿನಲ್ಲಿ ಬಾಕಿವುಳಿದಿರುವುದರಿಂದ ಲೋಕಪಾಲ ನೇಮಕ ವಿಳಂಬವಾಗುತ್ತಿದೆ, ಎಂದು ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಹೇಳಿದ್ದಾರೆ.

ನವದೆಹಲಿ (ಮಾ.28): ದೇಶದಲ್ಲಿ ಲೋಕಪಾಲ ನೇಮಕಕ್ಕೆ ಸಂಬಂಧಿಸಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತೀರ್ಪನ್ನು ಕಾಯ್ದಿರಿಸಿದೆ.

ನಾವು ಎಲ್ಲಾ ಕಕ್ಷಿದಾರರ ವಾದಗಳನ್ನು ಆಲಿಸಿದ್ದೇವೆ, ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ನ್ಯಾ. ರಂಜನ್ ಗೊಗೊಯಿ ನೇತ್ರತ್ರದ ಪೀಠವು ಹೇಳಿದೆ.

ಲೋಕಪಾಲ ಕಾಯ್ದೆಯಲ್ಲಿ 'ವಿಪಕ್ಷ ನಾಯಕ'ನ ವ್ಯಾಖ್ಯಾನಕ್ಕೆ ತಿದ್ದುಪಡಿ ಸಂಸತ್ತಿನಲ್ಲಿ ಬಾಕಿವುಳಿದಿರುವುದರಿಂದ ಲೋಕಪಾಲ ನೇಮಕ ವಿಳಂಬವಾಗುತ್ತಿದೆ, ಎಂದು ಅಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಹೇಳಿದ್ದಾರೆ.

ಲೋಕಪಾಲ ಕಾಯ್ದೆ-2013 ಪ್ರಕಾರ ಸಂಸತ್ತಿನಲ್ಲಿ ವಿಪಕ್ಷ ನಾಯಕ ಲೋಕಪಾಲ ನೇಮಕ ಸಮಿತಿಯ ಸದಸ್ಯರಾಗಿರುವರು. ಆದರೆ ಸಂಸತ್ತಿನಲ್ಲಿ ವಿಪಕ್ಷ ನಾಯಕರೇ ಇಲ್ಲ.

ಕಾಂಗ್ರೆಸ್ ಅತೀ ದೊಡ್ಡ ಪ್ರತಿಪಕ್ಷವಾದರೂ, ವಿಪಕ್ಷದ ಸ್ಥಾನಮಾನ ಪಡೆಯಲು ಬೇಕಾಗಿರುವಷ್ಟು ಸಂಸದರು ಅದರ ಬಳಿ ಇಲ್ಲ. ಆದುದರಿಂದ ಅತಿ ದೊಡ್ಡ ಪ್ರತಿಪಕ್ಷಕ್ಕೆ ವಿಪಕ್ಷದ ಸ್ಥಾನಮಾನ ನೀಡುವ ತಿದ್ದುಪಡಿಯಾಗಬೇಕಾಗಿದೆ.

click me!