ಜಲ್ಲಿಕಟ್ಟು ನಿಷೇಧ: ತ.ನಾ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

By Suvarna web DeskFirst Published Nov 16, 2016, 12:49 PM IST
Highlights

ಐತಿಹಾಸಿಕ ಜಲ್ಲಿಕಟ್ಟು ಕ್ರೀಡೆಯ ಮೇಲೆ ಹೇರಿದ್ದ ನಿಷೇಧವನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

ನವದೆಹಲಿ (ನ.16): ಐತಿಹಾಸಿಕ ಜಲ್ಲಿಕಟ್ಟು ಕ್ರೀಡೆಯ ಮೇಲೆ ಹೇರಿದ್ದ ನಿಷೇಧವನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

ಹೋರಿಗಳನ್ನು ಉತ್ತೇಜಿಸಿ ಆಡುವ ಈ ಕ್ರೀಡೆಗೆ ರಾಜ್ಯದ ಯಾವ ಮೈದಾನವೂ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಾಣಿಗಳಿಗೆ ಯಾವುದೇ ಹಕ್ಕುಗಳಿಲ್ಲದಿದ್ದರೂ ಸಂವಿಧಾನದ ಅಡಿಯಲ್ಲಿ ಅವುಗಳ ಬಾಧ್ಯತೆಯನ್ನು ನಿರಾಕರಿಸಿಸುವುದು ಆಗುವುದಿಲ್ಲ ಎಂದು ನ್ಯಾ.ದೀಪಕ್ ಮಿಶ್ರಾ ಹಾಗೂ ಫಾಲಿ ನಾರಿಮನ್ ಅಧ್ಯಕ್ಷೀಯ ಪೀಠ ಹೇಳಿದೆ.

ಜಲ್ಲಿಕಟ್ಟು ಸ್ಪರ್ಧೆಗೆ ಹೋರಿಗಳನ್ನು ಬಳಸಲು ಅವಕಾಶ ನೀಡಿದ ಕೇಂದ್ರದ ಅಧಿಸೂಚನೆಯನ್ನು ಕಳೆದ ವಾರ ನ್ಯಾಯಾಲಯ ಪ್ರಶ್ನಿಸಿತ್ತು.  

click me!