ಅರ್ಬನ್ ನಕ್ಸಲ್ಸ್: ನಾ ಮಧ್ಯೆ ಬರಲ್ಲ ಎಂದ ಸುಪ್ರೀಂ!

By Web DeskFirst Published Sep 28, 2018, 1:07 PM IST
Highlights

ಅಬರ್ಬನ್ ನಕ್ಸಲ್ಸ್ ಕುರಿತು ಸುಪ್ರೀಂ ಮಹತ್ವದ ತೀರ್ಪು! ಸಾಮಾಜಿಕ ಹೋರಾಟಗಾರರ ಬಂಧನ ವಿಷಯದಲ್ಲಿ ಮಧ್ಯ ಪ್ರವೇಶಿಸಲ್ಲ! ರೋಮಿಲಾ ಥಾಪರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ 
 

ನವದೆಹಲಿ(ಸೆ.28): ಭೀಮಾ ಕೊರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂಬಂತೆ ಸಾಮಾಜಿಕ ಹೋರಾಟಗಾರರ ಬಂಧನದ ವಿಷಯವಾಗಿ ಮಧ್ಯಪ್ರವೇಶಿಸುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ವರ ವರ ರಾವ್ ಸೇರಿದಂತೆ ಒಟ್ಟು 5 ಸಾಮಾಜಿಕ ಹೋರಾಟಗಾರರು ಬಂಧನಕ್ಕೊಳಗಾಗಿರುವುದನ್ನು ರೋಮಿಲಾ ಥಾಪರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಬಂಧನದ ವಿಷಯವಾಗಿ ಮಧ್ಯಪ್ರವೇಶಿಸುವುದಕ್ಕೆ ನಿರಾಕರಿಸಿದೆ.

Supreme Court refuses to interfere in the arrest of five activists Varavara Rao, Arun Ferreira, Vernon Gonsalves, Sudha Bharadwaj and Gautam Navlakha in Bhima-Koregaon case. pic.twitter.com/2vOlPGWba3

— ANI (@ANI)

ಭಿನ್ನ ಅಭಿಪ್ರಾಯ ಹೊಂದಿರುವ ಸಾಮಾಜಿಕ ಕಾರ್ಯಕರ್ತರು ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿಲ್ಲ. ಬದಲಾಗಿ ಮೇಲ್ನೋಟಕ್ಕೆ ಅವರು ನಿಷೇಧಿತ ಸಿಪಿಐ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರ ಬಗ್ಗೆ ಕೆಲವು ಸಾಕ್ಷ್ಯಗಳಿದ್ದವು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಖನ್ವಾಲಿಕರ್  ಹೇಳಿದ್ದಾರೆ. 

 

click me!