ಲೋಕಪಾಲ ನೇಮಕ ವಿಳಂಬ: ಕೇಂದ್ರಕ್ಕೆ ಸುಪ್ರೀಂ ತರಾಟೆ

By Suvarna Web DeskFirst Published Apr 27, 2017, 11:52 AM IST
Highlights

ಲೋಕಪಾಲ ಕಾಯ್ದೆ ಜಾರಿಗೆ ಆಗುತ್ತಿರುವ ವಿಳಂಬಕ್ಕೆ ಯಾವುದೇ ಸಮರ್ಥನೆಯು ಸ್ವೀಕಾರರಾರ್ಹವಲ್ಲವೆಂದು ಹೇಳಿರುವ ಸುಪ್ರೀಂ ಕೋರ್ಟ್, ಲೋಕಪಾಲರನ್ನು ನೇಮಿಸದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನವದೆಹಲಿ (ಏ.27): ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದಕ್ಕೆ ಇಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಮಡಿದೆ.

ಲೋಕಪಾಲ ಕಾಯ್ದೆ ಜಾರಿಗೆ ಆಗುತ್ತಿರುವ ವಿಳಂಬಕ್ಕೆ ಯಾವುದೇ ಸಮರ್ಥನೆಯು ಸ್ವೀಕಾರರಾರ್ಹವಲ್ಲವೆಂದು ಹೇಳಿರುವ ಸುಪ್ರೀಂ ಕೋರ್ಟ್, ಲೋಕಪಾಲರನ್ನು ನೇಮಿಸದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ-2013ಕ್ಕೆ 2014ರಲ್ಲೇ ರಾಷ್ಟ್ರಪತಿ ಅಂಕಿತ ದೊರಕ್ಕಿದ್ದು, 16 ಜನವರಿ 2016ರಿಂದ ಜಾರಿಗೆ ಬಂದಿದೆ. ಆದರೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಲೋಕಪಾಲರನ್ನು ನೇಮಿಸುವಲ್ಲಿ ವಿಳಂಬ ಮಾಡುತ್ತಿದೆಯೆಂದು ‘ಕಾಮನ್ ಕಾಸ್’ ಎಂಬ ಸರ್ಕಾರೇತರ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

click me!