ಹವಾಯಿ ಜಹಾಝ್’ನಲ್ಲಿ ಹವಾಯಿ ಚಪ್ಪಲಿ ನೋಡುವ ಆಸೆ: ಪ್ರಧಾನಿ ಮೋದಿ

By Suvarna Web DeskFirst Published Apr 27, 2017, 11:24 AM IST
Highlights

ಸಣ್ಣ-ನಗರಗಳ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಾಯುಯಾನ ಸಂಪರ್ಕವನ್ನು ಆರಂಭಿಸುವ ಉಡಾನ್ ಯೋಜನೆ ಭಾಗವಾಗಿ ಇಂದು ಶಿಮ್ಲಾ-ದೆಹಲಿ ಸಂಪರ್ಕ ಕಲ್ಪಿಸುವ 3 ಉಡಾನ್ ವಿಮಾನಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಶಿಮ್ಲಾ (ಏ.27): ಉಡಾನ್ ವಿಮಾನಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ,  ನಾನು ಹವಾಯಿ ಜಹಾಝ್’ನಲ್ಲಿ (ವಿಮಾನ) ಹವಾಯಿ ಚಪ್ಪಲಿಗಳನ್ನು ನೋಡಬಯಸುತ್ತೇನೆ ಎಂದಿದ್ದಾರೆ.

ಸಣ್ಣ-ನಗರಗಳ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಾಯುಯಾನ ಸಂಪರ್ಕವನ್ನು ಆರಂಭಿಸುವ ಉಡಾನ್ ಯೋಜನೆ ಭಾಗವಾಗಿ ಇಂದು ಶಿಮ್ಲಾ-ದೆಹಲಿ ಸಂಪರ್ಕ ಕಲ್ಪಿಸುವ 3 ಉಡಾನ್ ವಿಮಾನಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಸರ್ಕಾರದ ವಿವಿಧ ಯೋಜನೆಗಳ ಮೇಲೆ ಬೆಳಕು ಚಿಲ್ಲಿದ ಪ್ರಧಾನಿ,  ಬಡವರಿಗೆ ಪ್ರಯೋಜನವಾಗುವಂತಲು ಸರ್ಕಾರವು ಸ್ಟೆಂಟ್ ದರಗಳನ್ನು ಇಳಿಸಿದೆ, ಎಂದಿದ್ದಾರೆ.

ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಹಾಗೂ ಹಿರಿಯರಿಗೆ ಆರೋಗ್ಯಸೇವೆಗಳು ಲಭ್ಯವಾಗಬೇಕು ಎಂದಿರುವ ಪ್ರಧಾನಿ ಮೋದಿ, ಉಜ್ವಲ ಯೋಜನೆಯಿಂದ ಗ್ರಾಮೀಣ ಪ್ರದೇಶಕ್ಕೆ ಭಾರೀ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ದೆಹಲಿಯ ಕಡೆಯಿಂದ ಈಗ ಅಲೆಯು ಹಿಮಾಚಲ ಪ್ರದೇಶದತ್ತ ಸಾಗಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ವಿದರ್ಭ ಸಿಂಗ್’ರನ್ನು ಟೀಕಿಸಿದ ಪ್ರಧಾನಿ ಮೋದಿ,  ವಿಧರ್ಬ ಸಿಂಗ್ ವಕೀಲರೊಂದಿಗೆ ಕಳೆದಿರುವಷ್ಟು ಸಮಯ ದೇಶದ ಯಾವುದೇ ಮುಖ್ಯಮಂತ್ರಿಯು ವ್ಯಯಿಸಿರಲಾರರು ಎಂದು ಹೇಳಿದ್ದಾರೆ.

 

 

click me!