ವಿವಿಪ್ಯಾಟ್ ಕುರಿತ ವಿಪಕ್ಷಗಳ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

By Web DeskFirst Published May 7, 2019, 1:21 PM IST
Highlights

ಇವಿಎಂ ಯೋಗ್ಯತೆ ಪ್ರಶ್ನಿಸಿದ್ದ ವಿಪಕ್ಷಗಳಿಗೆ ಮತ್ತೆ ಹಿನ್ನೆಡೆ| ವಿವಿಪ್ಯಾಟ್​ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಬೇಕೆಂಬ 21 ವಿಪಕ್ಷಗಳ ಅರ್ಜಿ ತಿರಸ್ಕೃತ| ವಿಪಕ್ಷಗಳ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್| ಹಿಂದಿನ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್|

ನವದೆಹಲಿ(ಮೇ.07): ಮಹತ್ವದ ಬೆಳವಣಿಗೆಯೊಂದರಲ್ಲಿ ಇವಿಯಂಗಳ ವಿವಿಪ್ಯಾಟ್​ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಬೇಕು ಎಂದು ಪ್ರತಿಪಕ್ಷಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಚುನಾವಣೆಗಳಲ್ಲಿ ಪ್ರತಿ ವಿಧಾನಸಭಾ ವಲಯದಲ್ಲಿ ಇವಿಎಂಗಳಿಗೆ ವಿವಿಪ್ಯಾಟ್​ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವಂತೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 21 ವಿರೋಧ ಪಕ್ಷಗಳು ಸಲ್ಲಿಸಿದ್ದವು.

Supreme Court rejects review plea filed by twenty-one Opposition parties seeking a direction to increase VVPAT verification from five to at least 50% of EVMs during counting of votes in the general elections 2019. pic.twitter.com/zUdZEUDXUw

— ANI (@ANI)

ಇಂದು ಬೆಳಗ್ಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಈ ಹಿಂದಿನ  ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ.

ಕಳೆದ ಏಪ್ರಿಲ್​ 8ರಂದು ಸುಪ್ರೀಂಕೋರ್ಟ್​, ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭಾ ವಲಯದಲ್ಲಿ ಕನಿಷ್ಠ ಐದು ಕಡೆ ಇವಿಎಂಗಳೊಂದಿಗೆ ವಿವಿಪ್ಯಾಟ್ ಗಳನ್ನು ತಾಳೆ ಮಾಡುವ ವ್ಯವಸ್ಥೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. 

ಈ ಕುರಿತು 21 ವಿರೋಧ ಪಕ್ಷಗಳು  ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಸಲ್ಲಿಸಿದ್ದವು.

click me!