SBI ಉಳಿತಾಯ ಖಾತೆ ಬಡ್ಡಿದರ ಇಳಿಕೆ!

By Suvarna Web DeskFirst Published Aug 1, 2017, 10:31 AM IST
Highlights

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನ್ನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಸೋಮವಾರ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಉಳಿತಾಯ ಖಾತೆ ಠೇವಣಿ ಮೇಲಿನ ಬಡ್ಡಿದರವನ್ನು ಅದು ಶೇ.೦.5ರಷ್ಟು ಇಳಿಸಿದೆ. ಜುಲೈ 31ರಿಂದಲೇ ಇದು ಜಾರಿಗೆ ಬಂದಿದೆ. ಬಹುಶಃ ಇತರ ಬ್ಯಾಂಕ್‌ಗಳೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ.

ನವದೆಹಲಿ(ಆ.01): ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನ್ನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಸೋಮವಾರ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಉಳಿತಾಯ ಖಾತೆ ಠೇವಣಿ ಮೇಲಿನ ಬಡ್ಡಿದರವನ್ನು ಅದು ಶೇ.೦.5ರಷ್ಟು ಇಳಿಸಿದೆ. ಜುಲೈ 31ರಿಂದಲೇ ಇದು ಜಾರಿಗೆ ಬಂದಿದೆ. ಬಹುಶಃ ಇತರ ಬ್ಯಾಂಕ್‌ಗಳೂ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ.

ಉಳಿತಾಯ ಖಾತೆ (ಎಸ್‌ಬಿ) ಠೇವಣಿ ಮೇಲಿನ ಬಡ್ಡಿದರ ಕಡಿಮೆ ಮಾಡಿರುವ ಕಾರಣ ಬ್ಯಾಂಕ್‌ನ ಎಸ್‌ಬಿ ಬಡ್ಡಿದರ ವಾರ್ಷಿಕ ಶೇ.3.5ಕ್ಕೆ ಇಳಿಕೆಯಾಗಿದೆ. ಇದು 1 ಕೋಟಿ ರು.ವರೆಗಿನ ಠೇವಣಿಗೆ ಅನ್ವಯಿಸುತ್ತದೆ. 1 ಕೋಟಿ ರು.ಗಿಂತ ಹೆಚ್ಚು ಮೊತ್ತ ಎಸ್‌ಬಿ ಖಾತೆಯಲ್ಲಿದ್ದರೆ ಅದಕ್ಕೆ ಶೇ.4ರ ಬಡ್ಡಿದರವೇ ಮುಂದುವರಿಯಲಿದೆ. ‘ಇಳಿಯುತ್ತಿರುವ ಹಣದುಬ್ಬರ ಹಾಗೂ ಮತ್ತು ಹೆಚ್ಚಿನ ಬಡ್ಡಿದರಗಳು ಎಸ್‌ಬಿ ಬಡ್ಡಿದರ ಪರಿಷ್ಕರಣೆಗೆ ಕಾರಣ’ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ಷೇರು ಏರಿಕೆ:

ಎಸ್‌ಬಿಐ ಎಸ್‌ಬಿ ಬಡ್ಡಿದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಬ್ಯಾಂಕ್‌ನ ಷೇರು ಮೌಲ್ಯ ಶೇ.5ರಷ್ಟು ಹೆಚ್ಚಿದೆ. ಬಾಂಬೆ ಷೇರುಪೇಟೆ ಯಲ್ಲಿ ಎಸ್‌ಬಿಐ ಷೇರು ಶೇ.4.71ರಷ್ಟು ಏರಿ ಪ್ರತಿ ಷೇರು ಮೌಲ್ಯ 313.30 ರು. ಗೆ ಹೆಚ್ಚಿತು. ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ ಷೇರು ಮೌಲ್ಯ ಶೇ.4.47ರಷ್ಟು ಹೆಚ್ಚಿ 313.30 ರು.ಗೆ ಏರಿತು. ಇತರ ಕೆಲವು ಬ್ಯಾಂಕ್‌ಗಳ ಷೇರು ಮೌಲ್ಯ ಕೂಡ ಹೆಚ್ಚಿತು.

 

click me!