ಜೂಜಾಟಕ್ಕೆ ಹಣವಿಲ್ಲದಾಗ 5 ಪತ್ನಿಯರನ್ನೇ ಅಡವಿಟ್ಟ ರಾಜಕುಮಾರ: ಆಟದಲ್ಲಿ ಸೋತು ಪತ್ನಿಯರನ್ನೂ ಕಳೆದುಕೊಂಡ

By Suvarna Web DeskFirst Published Jun 11, 2017, 2:22 PM IST
Highlights

ಮಹಾಭಾರತದಲ್ಲಿ ಕೌರವರೊಂದಿಗೆ ಕವಡೆಯಾಟದಲ್ಲಿ ಸೋತ ಪಾಂಡವರು ಹೇಗೆ ತಮ್ಮ ಪತ್ನಿ ದ್ರೌಪದಿಯನ್ನು ಕಳೆದುಕೊಂಡರು ಎಂಬ ಕತೆ ಎಲ್ಲರಿಗೂ ತಿಳಿದಿರುವಂತಹುದ್ದೇ. ಇದೀಗ ಇಂತಹುದೇ ಘಟನೆ ಸೌದಿ ಅರೇಬಿಯಾದಲ್ಲೂ ನಡೆದಿದೆ. ಇಲ್ಲಿನ ರಾಜಕುಮಾರ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಜೀಜ್ ಜೂಜಾಟದಲ್ಲಿ ತಮ್ಮ ಐವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ 6 ಗಂಟೆಯ ನಡೆದ ಈ ಜೂಜಾಟದಲ್ಲಿ ಅವರು ಅಪಾರ ಪ್ರಮಾಣದ ನಗದು ಹಣವನ್ನೂ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.

ನವದೆಹಲಿ(ಜೂ.11): ಮಹಾಭಾರತದಲ್ಲಿ ಕೌರವರೊಂದಿಗೆ ಕವಡೆಯಾಟದಲ್ಲಿ ಸೋತ ಪಾಂಡವರು ಹೇಗೆ ತಮ್ಮ ಪತ್ನಿ ದ್ರೌಪದಿಯನ್ನು ಕಳೆದುಕೊಂಡರು ಎಂಬ ಕತೆ ಎಲ್ಲರಿಗೂ ತಿಳಿದಿರುವಂತಹುದ್ದೇ. ಇದೀಗ ಇಂತಹುದೇ ಘಟನೆ ಸೌದಿ ಅರೇಬಿಯಾದಲ್ಲೂ ನಡೆದಿದೆ. ಇಲ್ಲಿನ ರಾಜಕುಮಾರ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಜೀಜ್ ಜೂಜಾಟದಲ್ಲಿ ತಮ್ಮ ಐವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ 6 ಗಂಟೆಯ ನಡೆದ ಈ ಜೂಜಾಟದಲ್ಲಿ ಅವರು ಅಪಾರ ಪ್ರಮಾಣದ ನಗದು ಹಣವನ್ನೂ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಜೀಜ್ ಡ್ರಗ್ಸ್, ಜೂಜಾಟ ಹಾಗೂ ತನ್ನ ಐಷಾರಾಮಿ ಜೀವನಕ್ಕಾಗಿ ವಿಶ್ವದಾದ್ಯಂತ ಫೇಮಸ್ ಆಗಿದ್ದರು. ಇದೀಗ ಇದೇ ಜೂಜಾಟದ ಹುಚ್ಚಿನಿಂದಾಗಿ ತನ್ನನ್ನು ನಂಬಿಕೊಂಡಿದ್ದ ಪತ್ನಿಯನರನ್ನೂ ಅಡವಿಟ್ಟು ಕಳೆದುಕೊಂಡಿದ್ದಾರೆ. ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದ್ದು 'ಕೆಲ ದಿನಗಳ ಹಿಂದೆಡ ರಾಜಕುಮಾರ ಮಾಜಿದ್ ಸಿಮ್ರ್'ನ ಸಿನಯೀ ಗ್ರ್ಯಾಂಡ್ ಕಸೀನೋಗೆ ಪೋಕರ್ ಆಡುವ ಸಲುವಾಗಿ ತೆರಳಿದ್ದರು. ಇಲ್ಲಿ ಜೂಜಾಟ ಆರಂಭಿಸಿದ ರಾಜಕುಮಾರ ಒಂದಾದ ಬಳಿಕ ಮತ್ತೊಂದರಂತೆ ಪ್ರತಿಯೊಂದು ಆಟವನ್ನೂ ಸೋತರು. ನಗದು ಹಣ ಕಳೆದುಕೊಂಡರೂ ಸುಮ್ಮನಾಗದ ರಾಜಕುಮಾರ 160 ಕೋಟಿ ರೂಪಾಯಿಯ ಬದಲಾಗಿ ತಮ್ಮ ಐವರು ಪತ್ನಿಯರನ್ನೇ ಅಡವಿಟ್ಟಿದ್ದಾರೆ. ಬಳಿಕ ನಡೆದ ಆಟದಲ್ಲೂ ಸೋಲನುಭವಿಸಿದಾಗ ರಾಜಕುಮಾರ ಅಡವಿಟ್ಟ ಐವರು ಪತ್ನಿಯರನ್ನು ಬಿಡಿಸಿಕೊಳ್ಳಲಾಗದೇ ಅಲ್ಲೇ ಬಿಟ್ಟು ತೆರಳಿದ್ದಾರೆ' ಎಂದು ತಿಳಿಸಿವೆ.

ಈ ಮೊದಲೂ ಇಲ್ಲಿಗಾಗಮಿಸಿ ಜೂಜಾಟ ಆಡುವ ಜನರು ಹಣ ಇಲ್ಲದ ವೇಳೆ ತಮ್ಮ ಬಳಿ ಇದ್ದ ೊಂಟೆ ಹಾಗೂ ಕುದುರೆಗಳನ್ನು ಅಡವಿಟ್ಟು ಆಟ ಮುಂದುವರೆಸಿದ್ದ ಘಟನೆಗಳಿವೆ ಆದರೆಪತ್ನಿಯರನ್ನೇ ಅಡವಿಟ್ಟು ಆಡಿದ್ದು ಇದೇ ಮೊದಲ ಬಾರಿ ಎಂದು ಕಸೀನೋದ ಮ್ಯಾನೇಜರ್ ಮಾತುಗಳಿಂದ ತಿಳಿದು ಬಂದಿದೆ.

ಇನ್ನು ಇಲ್ಲಿನ ವಿದೇಶಾಂಗ ಸಚಿವರು ಈ ಕುರಿತಾಗಿ ಮಾತನಾಡಿದ್ದು 'ನಮ್ಮ ಸರ್ಕಾರ ಜೂಜಾಟದಲ್ಲಿ ಸೋಲನುಭವಿಸಿ ಅಲ್ಲೇ ಉಳಿದಿರುವ ರಾಜಕುಮಾರನ ಐವರು ಪತ್ನಿಯರನ್ನು ಶೀಘ್ರದಲ್ಲೇ ಮರಳಿ ಕರೆತರುವ ಕಾಯಕದಲ್ಲಿ ತೊಡಗಿದೆ. ಇದಕ್ಕಾಗಿ ರಾಜಕುಮಾರ ಪತ್ನಿಯರ ಮೇಲೆ ಹೂಡಿದ್ದ ಹಣವನ್ನು ನಾವೇ ಕೊಟ್ಟು ಅವರನ್ನು ಹಿಂದೆ ಕರೆತರುತ್ತೇವೆ' ಎಂದು ತಿಳಿಸಿದ್ದಾರೆ.

ಇನ್ನು ರಾಜಕುಮಾರನ ಈ ಕೃತ್ಯ ಅಲ್ಲಿನ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿದೆ. ಇನ್ನು ರಾಜಕುಮಾರನ ಪತ್ನಿಯರು ಮರಳಿ ಸೌದಿ ಅರೇಬಿಯಾಕ್ಕೆ ಬರುತ್ತಾರೆಯೇ ಎಂಬ ಕುರಿತಾಗಿಯೂ ಯಾವುದೇ ಸ್ಪಷ್ಟನೆ ದೊರಕಿಲ್ಲ. ಆದರೆ ಅಲ್ಲಿನ ಸರ್ಕಾರ ಐವರನ್ನು ಬಿಡಿಸಿ ತರುವ ಆಶ್ವಾಸನೆ ನೀಡಿದೆ. ಒಟ್ಟು 9 ಪತ್ನಿಯರನ್ನು ಹೊಂದಿರುವ ರಾಜಕುಮಾರ ಈ ಮೊದಲೂ ಹಲವಾರು ವಿವಾಗಳಲ್ಲಿ ಸಿಲುಕಿ ಚರ್ಚೆಗೀಡಾಗಿದ್ದರು.

click me!