ಜಾರಕಿಹೊಳಿಗೆ ಸಿಎಂ ಪಟ್ಟ : ಅಭಿಯಾನ ವೈರಲ್

Published : Feb 01, 2019, 10:38 AM IST
ಜಾರಕಿಹೊಳಿಗೆ ಸಿಎಂ ಪಟ್ಟ : ಅಭಿಯಾನ ವೈರಲ್

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ವಿವಿಧ ರೀತಿಯ ಮಾಸ್ಟರ್ ಪ್ಲಾನ್ ಗಳು ರಾಜಕೀಯ ಚರ್ಚೆಗಳು ಆಗುತ್ತಿರುವ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಬಗೆಗಿನ ಅಭಿಯಾನವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಸಿಎಂ ಪಟ್ಟಕ್ಕಾಗಿ ಅಭಿಯಾನ ಆರಂಭಿಸಿದ್ದಾರೆ.

ಬೆಂಗಳೂರು :  ಅತ್ತ ನಮ್ಮ ಸಿಎಂ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಶಾಸಕರು ಹೇಳಿಕೊಂಡರೆ, ಇತ್ತ ಸತೀಶ್ ಜಾರಕಿಹೊಳಿ ನಮ್ಮ ಸಿಎಂ ಎಂದು ಅವರ ಬೆಂಬಲಿಗರು ಅಭಿಯನವೊಂದನ್ನು  ಆರಂಭಿಸಿದ್ದಾರೆ

ನಮ್ಮ ಸಿಎಂ ಸಿದ್ದರಾಮಯ್ಯನವರೇ ಎಂಬ ಶಾಸಕರ ಹೇಳಿಕೆಗೆ ಪ್ರಚೋದನೆಗೊಂಡು ಸತೀಶ್ ಬೆಂಬಲಿಗರಿಂದ ಸಮಾಜಿಕ ಜಾಲತಾಣಗಳಲ್ಲಿ ನಮ್ಮ ಸಿಎಂ ಸತೀಶ್ ಜಾರಕಿಹೊಳಿ ಎಂದು ಅಭಿಯಾನ ನಡೆಯುತ್ತಿದೆ. 

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಅಭಿಮಾನಿಗಳು ಈ ಅಭಿಯಾನ ಆರಂಭ ಮಾಡಿದ್ದು, ವಿವಿಧ ವಾಟ್ಸಾಪ್ ಹಾಗೂ ಫೇಸ್ ಬುಕ್ ಪೇಜುಗಳಲ್ಲಿ ಈ ರೀತಿಯ ಬರಹಗಳು ಕಂಡು ಬರುತ್ತಿವೆ. 

ಈ ಹಿಂದೆ ಸತೀಶ್ ಸಿ ಎಂ ಯಾಕಾಗಬಾರದೂ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು. ಅಲ್ಲದೇ ಅವರ ಸಹೋದರ ರಮೇಶ್ ಜಾರಕಿಹೊಳಿ ಕೂಡ ಸತೀಶ್ ಸಿಎಂ ಆಗುವವರೆಗೂ  ಶ್ರಮಿಸುವುದಿಲ್ಲ ಎಂದಿದ್ದರು.  

ಆದರೆ ಇದೀಗ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಜಾರಕಿಹೊಳಿ ನಮ್ಮ ಸಿಎಂ ಎಂಬ ಅಭಿಯಾನ ಆರಂಭಿಸಿದ್ದಾರೆ. ಎಲ್ಲೆಡೆ ಈ ಅಭಿಯಾನದ ಬರರಹಗಳು ಸಾಕಷ್ಟು ವೈರಲ್ ಆಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಮಾಜದಲ್ಲಿ ಸಾಮರಸ್ಯ ಸಾಧಿಸಲು ಆಧ್ಯಾತ್ಮಿಕತೆ ಬಹಳ ಸಹಕಾರಿ:ಭಟ್ಟಾರಕ ಶ್ರೀ
ಹೋಮ್ ವರ್ಕ್ ಹೇಗೆ ಮಾಡಲಿ? ಪೊಲೀಸರ ಪ್ರಶ್ನಿಸಿದ 3ನೇ ತರಗತಿ ಬಾಲಕಿಯ ಕ್ಯೂಟ್ ವಿಡಿಯೋ