ಸುಪ್ರೀಂ ತೀರ್ಪಿನ ಬಳಿಕ ತಮಿಳುನಾಡಿನಲ್ಲಿ ಹೈಡ್ರಾಮಾ

By Suvarna Web DeskFirst Published Feb 14, 2017, 6:57 AM IST
Highlights

ಹೊಸ ಬೆಳವಣಿಗೆ ಎಂಬಂತೆ ಜಯಲಲಿತಾ ಸೋದರ ಜಯಕುಮಾರ್ ಮಗ ದೀಪಕ್'ಗೆ ಪಟ್ಟ ಕಟ್ಟಲು ಶಶಿಕಲಾ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಚೆನ್ನೈ(ಫೆ.14): ಸುಪ್ರೀಂ ಕೋರ್ಟ್'ನಿಂದ ಮಹತ್ತರ ತೀರ್ಪು ಹೊರಬಿದ್ದ ಬೆನ್ನಲ್ಲೇ ತಮಿಳುನಾಡು ರಾಜ್ಯರಾಜಕೀಯದಲ್ಲಿ ಮತ್ತೊಮ್ಮೆ ಹೈಡ್ರಾಮಾ ಆರಂಭವಾಗಿದೆ.

ಶಶಿಕಲಾ ಕುಟುಂಬದವರೇ ತಮಿಳುನಾಡು ಮುಖ್ಯಮಂತ್ರಿ ಆಗಬೇಕೆಂದು ಶಶಿಕಲಾ ಬೆಂಬಲಿಗರು ಬಿಗಿಪಟ್ಟು ಹಿಡಿದಿದ್ದಾರೆ. ಇದನ್ನು ಬಿಟ್ಟು ಬೇರೆ ಯಾರಿಗೂ ಸಿಎಂ ಪಟ್ಟ ಬಿಟ್ಟುಕೊಡಬಾರದು ಎಂದು ಶಶಿಕಲಾ ಬೆಂಬಲಿಗರು ರೆಸಾರ್ಟ್'ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.

ಹೊಸ ಬೆಳವಣಿಗೆ ಎಂಬಂತೆ ಜಯಲಲಿತಾ ಸೋದರ ಜಯಕುಮಾರ್ ಮಗ ದೀಪಕ್'ಗೆ ಪಟ್ಟ ಕಟ್ಟಲು ಶಶಿಕಲಾ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಶಶಿಕಲಾ ವಿರುದ್ಧ ಸಿಡಿದೆದ್ದಿದ್ದ ದೀಪಾ ಜಯಕುಮಾರ್ ಸೋದರ ಜಯಕುಮಾರ್ ಪುತ್ರನಿಗೆ ಪಟ್ಟಕಟ್ಟುವ ಸಾಧ್ಯತೆಯಿದೆ.

ಶಶಿಕಲಾ ಗೇಮ್ ಪ್ಲಾನ್​'ನ ದೀಪಕ್ ಯಾರು ಗೊತ್ತಾ..?
ಜಯಲಲಿತಾರ ಅಣ್ಣ ಜಯಕುಮಾರ್​'ರ ದೊಡ್ಡ ಮಗ ದೀಪಕ್. ಐಟಿ ಉದ್ಯೋಗಿಯಾಗಿರುವ ದೀಪಕ್ ಇತ್ತೀಚೆಗಷ್ಟೇ ಅಮೆರಿಕದಿಂದ ವಾಪಸ್ ಆಗಿದ್ದಾರೆ.
ಪೋಯಸ್ ಗಾರ್ಡನ್​ ಪಕ್ಕದಲ್ಲೇ ಜಯಕುಮಾರ್ ಮನೆ ಇದ್ದು, ಜಯಲಲಿತಾ ಬಂಧುಗಳಲ್ಲಿ ಅವರ ಮನೆಗೆ ಹೋಗುತ್ತಿದ್ದ ಏಕೈಕ ವ್ಯಕ್ತಿ ದೀಪಕ್.
ದೀಪಕ್ ತಂಗಿ ದೀಪಾ ಜಯಕುಮಾರ್ ಶಶಿಕಲಾ ವಿರುದ್ಧ ತಿರುಗಿಬಿದ್ದಿದ್ದಾಗ, ಅವರ ವಿರುದ್ಧ ರಾಜಕೀಯಕ್ಕೆ ಧುಮುಕುವುದಾಗಿ ದೀಪಕ್ ಘೋಷಿಸಿದ್ದರು
ಜಯಲಲಿತಾ ಅಂತ್ಯಕ್ರಿಯೆ ವೇಳೆಯಲ್ಲಿ ಕೂಡಾ ದೀಪಕ್ ಜೊತೆಗಿದ್ದರು. ಜಯಾ ನಿವಾಸ ‘ವೇದನಿಲಯಂ’ಗೆ ದೀಪಕ್ ಹೋಗಿ ಬರುತ್ತಿದ್ದರು.

click me!