ಶಶಿಕಲಾ ಪತಿ ನಟರಾಜನ್ ನಿಧನ

Published : Mar 20, 2018, 06:20 AM ISTUpdated : Apr 11, 2018, 12:42 PM IST
ಶಶಿಕಲಾ ಪತಿ ನಟರಾಜನ್ ನಿಧನ

ಸಾರಾಂಶ

ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪತಿ ನಟರಾಜನ್​ ಕಳೆದ ರಾತ್ರಿ  ವಿಧಿ ವಶರಾಗಿದ್ದಾರೆ.

ಚೆನ್ನೈ: ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪತಿ ನಟರಾಜನ್​ ಕಳೆದ ರಾತ್ರಿ  ವಿಧಿ ವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟರಾಜನ್ ಚೆನ್ನೈನ ಗ್ಲೋಬಲ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ನಟರಾಜನ್ ಅವರಿಗೆ 76 ವರ್ಷ ವಯಸ್ಸಾಗಿತ್ತು.

ಬಹು ಅಂಗಾಂಗ ವೈಫಲ್ಯ, ಶ್ವಾಸಕೋಶ ಸೋಂಕು ಹಿನ್ನೆಲೆ ಮಾ.16ರಂದು ಚೆನ್ನೈನ ಗ್ಲೋಬಲ್​ ಹೆಲ್ತ್​ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಿಕಲಾ ಪತಿ ಚಿಕಿತ್ಸೆ ಫಲಿಸದೇ ತಡರಾತ್ರಿ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ.

ಶ್ರೀರಾಮಚಂದ್ರ ಮೆಡಿಕಲ್​ ಆಸ್ಪತ್ರೆಯಲ್ಲಿ ದೇಹ ಸಂರಕ್ಷಣೆಗೆ ಇಡಲಾಗಿದೆ. ಇನ್ನು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾಗೆ ಪೆರೋಲ್​ ಸಿಕ್ಕ ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ.ಶಶಿಕಲಾ ಅವರು ಇನ್ನಷ್ಟೇ ತಮಿಳುನಾಡಿಗೆ ತೆರಳಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!