ಸಿಎಂ ಆಗುವ ಕನಸು ಹೊತ್ತಿದ್ದ ಚಿನ್ನಮ್ಮಗೆ ಕ್ಯಾಂಡಲ್ ತಯಾರಿಸುವ ಕೆಲಸ

Published : Feb 16, 2017, 02:51 AM ISTUpdated : Apr 11, 2018, 12:57 PM IST
ಸಿಎಂ ಆಗುವ ಕನಸು ಹೊತ್ತಿದ್ದ ಚಿನ್ನಮ್ಮಗೆ ಕ್ಯಾಂಡಲ್ ತಯಾರಿಸುವ ಕೆಲಸ

ಸಾರಾಂಶ

ಇದೇ ಪ್ರಕಾರ ಶಶಿಕಲಾ ಸೇರಿದಂತೆ ಮೂವರು ಕೈದಿಗಳು ನಡೆದುಕೊಳ್ಳಬೇಕಿದೆ. ಮುಖ್ಯವಾಗಿ ಶಶಿಕಲಾಗೆ ಕ್ಯಾಂಡಲ್  ತಯಾರಿಸುವ ಕೆಲಸ ನೀಡಲಾಗಿದ್ದು. ಸಿಎಂ ಗದ್ದುಗೆ ಕನಸು ಕಾಣುತ್ತಿದ್ದ  ಚಿನ್ನಮ್ಮ  ಕ್ಯಾಂಡಲ್ ಕೆಲಸ ಮಾಡುತ್ತಾ ಜೈಲಿನಲ್ಲಿ  ಕಾಲ ಕಳೆಯಬೇಕಾಗಿ ಬಂದಿದ್ದು ದುರಂತ.

ಬೆಂಗಳೂರು (ಫೆ.16): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ  ದೋಷಿಯಾದ ಶಶಿಕಲಾ ನಟರಾಜನ್ ಕೊನೆಗೂ ಜೈಲು ಸೇರಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೊಠಡಿ ಸಂಖ್ಯೆ 48ರಲ್ಲಿ ಶಶಿಕಲಾ ಬಂಧಿಯಾಗಿದ್ದಾರೆ. ಚಿನ್ನಮ್ಮಗೆ ಕೈದಿ ನಂಬರ್ 9234  ಸಂಖ್ಯೆ ನೀಡಲಾಗಿದ್ದು, ಮೂರೂವರೆ ವರ್ಷ ಜೈಲಿನಲ್ಲಿ ಸಾಮಾನ್ಯ ಕೈದಿಯಾಗಿ ಕಾಲ ಕಳೆಯಬೇಕಿದೆ.

ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರನ್ ಈಗ ಜೈಲು ಹಕ್ಕಿಗಳಾಗಿದ್ದಾರೆ.  ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದಾಯ್ತು. ನಿನ್ನೆ ಪರಪ್ಪನ ಅಗ್ರಾಹರ ಜೈಲು ಸೇರುವ ಪ್ರಕ್ರಿಯೆ ಪೂರ್ಣ ಗೊಳ್ಳುವ ಹೊತ್ತಿಗೆ  ಸಂಜೆ 7 ಗಂಟೆ ಆಗಿತ್ತು. ಹೀಗಾಗಿ  ನಿನ್ನೆ ಮೂವರಿಗೂ ಹೊರಗಿನಿಂದಲೇ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತೀವ್ರ ಜರ್ಜರಿತರಾಗಿದ್ದ ಶಶಿಕಲಾ ಸಂಜೆ ಊಟ ಮಾಡಿಲ್ಲ ಎನ್ನಲಾಗಿದೆ.

ಹೇಗಿರುತ್ತೆ ಗೊತ್ತಾ ಶಶಿಕಲಾ ದಿನಚರಿ ?

ಬೆಳಗ್ಗೆ 5.30 ರಿಂದ 7ಗಂಟೆ ನಡುವೆ ಹಾಗೂ ಸಂಜೆ 4.30ರಿಂದ 6.30ರ ನಡುವಿನ ಅವಧಿಯಲ್ಲಿ ವಾಯುವಿಹಾರ ಮಾಡಬಹುದು. ಗ್ರಂಥಾಲಯದಲ್ಲೇ ದಿನಪತ್ರಿಕೆ ಓದಲು ಅವಕಾಶ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ಸೆಲ್‌'ಗೆ ತರಿಸಿಕೊಳ್ಳದೆ, ಗ್ರಂಥಾಲಯಕ್ಕೇ ಹೋಗಿ ಓದುವಂತೆ ಮೂವರಿಗೂ  ಅವಕಾಶ ನೀಡಲಾಗಿದೆ ಎನ್ನಲಾಗ್ತಿದೆ.

ಕೈದಿಗಳಿಗೆ ಏನೇನು ನೀಡಲಾಗಿದೆ ?

ಶಶಿಕಲಾ ಹಾಗೂ ಇಳವರಸಿಗೆ ತಲಾ 4 ಬಿಳಿ ಬಣ್ಣದ ಸೀರೆ, ರವಿಕೆಗಳು

ಸುಧಾಕರನ್‌ಗೆ ತಲಾ ಎರಡು ಬಿಳಿ ಅಂಗಿ, ಚಡ್ಡಿ, ಬಿಳಿ ಟೋಪಿ

ಮೂವರಿಗೂ ತಾಮ್ರದ ತಟ್ಟೆ, ಬಟ್ಟಲು, ಪ್ಲಾಸ್ಟಿಕ್ ತಂಬಿಗೆ

ಮಲಗಲು ಜಮಕಾನ, ಬಿಳಿ ಬಣ್ಣದ ಹೊದಿಕೆ

15 ದಿನಗಳಿಗೊಮ್ಮೆ ಸ್ನಾನದ ಸಾಬೂನು, ಬಟ್ಟೆ ಸಾಬೂನು

ಆಹಾರ ಕ್ರಮ ಹೇಗಿರುತ್ತೆ?

ಬೆಳಗ್ಗೆ 250 ಗ್ರಾಂ  ಆಹಾರ

ಮಧ್ಯಾಹ್ನ, ರಾತ್ರಿ 350 ಗ್ರಾಂ ಊಟ

ಅನ್ನ, ಸಾರಿನ ಜತೆಗೆ ಚಪಾತಿ ಅಥವಾ ಮುದ್ದೆ

ಒಂದು ಹೊತ್ತು 200 ಎಂ.ಎಲ್ ಮಜ್ಜಿಗೆ

ವಾರಕ್ಕೆ ಒಂದು ದಿನ ಮಾಂಸದ ಊಟ

ಇದೇ ಪ್ರಕಾರ ಶಶಿಕಲಾ ಸೇರಿದಂತೆ ಮೂವರು ಕೈದಿಗಳು ನಡೆದುಕೊಳ್ಳಬೇಕಿದೆ. ಮುಖ್ಯವಾಗಿ ಶಶಿಕಲಾಗೆ ಕ್ಯಾಂಡಲ್  ತಯಾರಿಸುವ ಕೆಲಸ ನೀಡಲಾಗಿದ್ದು. ಸಿಎಂ ಗದ್ದುಗೆ ಕನಸು ಕಾಣುತ್ತಿದ್ದ  ಚಿನ್ನಮ್ಮ  ಕ್ಯಾಂಡಲ್ ಕೆಲಸ ಮಾಡುತ್ತಾ ಜೈಲಿನಲ್ಲಿ  ಕಾಲ ಕಳೆಯಬೇಕಾಗಿ ಬಂದಿದ್ದು ದುರಂತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ