ಚಾಮುಂಡಿ ದೇಗುಲದ ಸೀರೆಯಿಂದ 1 ಕೋಟಿ

By Web DeskFirst Published Oct 26, 2018, 9:07 AM IST
Highlights

ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರು ನೀಡಿದ ಸೀರೆಗಳ ಹರಾಜು ಪ್ರಕ್ರಿಯೆಯಿಂದಲೇ 1 ಕೋಟಿಯಷ್ಟು ಆದಾಯ ದೇಗುಲಕ್ಕೆ ಬರುತ್ತಿದೆ. 

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಪಿಸುವ ಹರಕೆ ಸೀರೆಗಳ ಮಾರಾಟದಿಂದಲೇ ದೇವಳಕ್ಕೆ ವರ್ಷಕ್ಕೆ ಸುಮಾರು 80 ರಿಂದ 1 ಕೋಟಿ ಆದಾಯ ಬರುತ್ತಿದೆ. ಈ ಬಗ್ಗೆ ಗುರುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್, ಈ ಹಿಂದೆ ತಿಂಗಳಿಗೆ ಒಮ್ಮೆ ಅಥವಾ ಕೆಲವು ತಿಂಗಳಿಗೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿತ್ತು. 

ಆದರೆ ಎರಡು- ಮೂರು ವರ್ಷದಿಂದ ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದರು. ದೇವಿಗೆ ಹರಕೆ ಹೊತ್ತ ಭಕ್ತರು 300 ರು. ಗಳಿಂದ ಹಿಡಿದು  ಹತ್ತಾರು ಸಾವಿರ ರುಪಾಯಿ ಬೆಲೆ ಬಾಳುವ ರೇಷ್ಮೆ, ಜರಿ ಸೀರೆ ಮತ್ತು ಸಾಧಾರಣ ಸೀರೆಗಳನ್ನು ಅರ್ಪಿಸುತ್ತಾರೆ. 

ಹೀಗೆ ಸಂಗ್ರಹವಾದ ಸೀರೆಯನ್ನು ಪ್ರತಿನಿತ್ಯ ಅಥವಾ ಎರಡು ದಿನಕ್ಕೆ ಒಮ್ಮೆ(ಸೀರೆ ಸಂಗ್ರಹವಾದಂತೆ) ಗರ್ಭ ಗುಡಿಯ ಹಿಂಭಾಗದ ಕೌಂಟರ್‌ನಲ್ಲಿ ಶೇ.25  ರಿಯಾಯಿತಿ ಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.

click me!