
ಬೆಂಗಳೂರು (ಮಾ.07): 'ವೈದ್ಯೋ ನಾರಾಯಣ ಹರಿ' ಅಂತಾರೆ ಆದರೆ ಇಲ್ಲೊಬ್ಬ ಡಾಕ್ಟರ್ ಅದಕ್ಕೆ ತದ್ವಿರುದ್ಧ. ಜೀವದ ಜೊತೆ ಚೆಲ್ಲಾಟವಾಡುವ ಈ ಭೂಪ ವೈದ್ಯನನ್ನು ಕರ್ನಾಟಕ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯಲ್ಲಿ ಹೋಮಿಯೋಪತಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿರುವ ಬಾಬಾಸಾಹೇಬ್ ಕಿದ್ರಾಪುರೆ ಎಂಬುವವರು ಅಬಾರ್ಶನ್ ಮಾಡಿಸುತ್ತಿದ್ದರು. ಇವರನ್ನು ಬಂಧಿಸಲು ಮಹಾರಾಷ್ಟ್ರ ಪೊಲೀಸರಿಗೆ ಸಾಧ್ಯವಾಗದಿದ್ದಾಗ ಕರ್ನಾಟಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ 19 ಭ್ರೂಣಗಳು ಸಾಂಗ್ಲಿಯ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಡಾ.ಕಿದ್ರಾಪುರೆ ಅಕ್ರಮವಾಗಿ ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿದ್ದು, ಬಳಿಕ ಆ ಮಹಿಳೆ ಸಾವನ್ನಪ್ಪಿದ್ದರು.
ಪೊಲೀಸರು ತನಿಖೆ ನಡೆಸುವ ವೇಳೆ ಭ್ರೂಣಗಳು ತುಂಬಿರುವ ಪ್ಲಾಸ್ಟಿಕ್ ಚೀಲಗಳು ಹಳ್ಳದಲ್ಲಿ ಪತ್ತೆಯಾಗಿವೆ. ಈ ಹಳ್ಳವು ಇವರ ಕ್ಲಿನಿಕ್ ನಿಂದ 1 ಕಿಮೀ ದೂರದಲ್ಲಿದೆ. ಇದರ ಹಿಂದೆ ದೊಡ್ಡ ದಂಧೆಯೇ ನಡೆಯುತ್ತಿದೆ ಎನ್ನುವ ಅನುಮಾನ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.