ಕನ್ನಡದ ಮೇರು ನಟ ಸಿ.ಎಚ್.ಲೋಕನಾಥ್ ಇನ್ನಿಲ್ಲ

Published : Dec 31, 2018, 09:00 AM ISTUpdated : Dec 31, 2018, 10:32 AM IST
ಕನ್ನಡದ ಮೇರು ನಟ  ಸಿ.ಎಚ್.ಲೋಕನಾಥ್ ಇನ್ನಿಲ್ಲ

ಸಾರಾಂಶ

ರಂಗಭೂಮಿ ಹಾಗೂ ಚಲನಚಿತ್ರರಂಗದ ಮೇರು ನಟ ಲೋಕನಾಥ್ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರು : ರಂಗಭೂಮಿ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರು ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಕನಾಥ್ ನಿನ್ನೆ ರಾತ್ರಿ 12.15ಕ್ಕೆ ಕೊನೆಯುಸಿರೆಳೆದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.  

ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು 1972 ರಿಂದ 'ನಟರಂಗ'ದ ಪ್ರಮುಖ ನಟನಾಗಿ 'ಸಮುದಾಯ', 'ಸೂತ್ರದಾರ' ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 

ಸಿ. ಎಚ್. ಲೋಕನಾಥ್ ಭೂತಯ್ಯನ ಮಗ ಅಯ್ಯು ಸೇರಿದಂತೆ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಪೋಷಕ ಪಾತ್ರಗಳ ಮೂಲಕ ಮನೆಮಾತಾಗಿದ್ದರು.  

ಸೋಮವಾರ ಮಧ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಲೋಕನಾಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲು ವ್ಯವಸ್ಥೆ ಮಾಡುವ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಲೋಕನಾತ್ ಅವರು ಆಗಸ್ಟ್ 14/, 1927ರಲ್ಲಿ ಜನಿಸಿದರು.  ರಂಗಭೂಮಿ ಹಾಗೂ ಚಲನಚಿತ್ರರಂಗ ಎರಡರಲ್ಲೂ ಕೂಡ ಸಕ್ರೀಯರಾಗಿದ್ದರು. 

ನಟಿಸಿದ ಪ್ರಮುಖ ಚಿತ್ರಗಳು
ಭೀಮಾ ತೀರದಲ್ಲಿ
ಪ್ರೇಮ್ ಕಹಾನಿ
ಅಂತು ಇಂತು ಪ್ರೀತಿ ಬಂತು
ಕಾಡ ಬೆಳದಿಂಗಳು
ಕಾಕನಕೋಟೆ
ಮಿಂಚಿನ ಓಟ
ಬಂಗಾರದ ಮನುಷ್ಯ
ನಾಗರಹಾವು

ಭೂತಯ್ಯನ ಮಗ ಅಯ್ಯು

ಮಾಲ್ಗುಡಿ ಡೇಸ್ ನಲ್ಲಿಯೂ ಕೂಡ ಲೋಕನಾಥ್ ನಟಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ ಹೆಸರಿಗೆ ಅಮೆರಿಕಾದಲ್ಲಿ 'ಕೀರ್ತಿ' ತಂದ ಅನೂಯಾ ಸ್ವಾಮಿ.. ಯಾರು ಈ 'ಪಂಕಜ'..?!
ಅಯ್ಯಪ್ಪ ಮಾಲಾಧಾರಿ ಆಟೋ ಚಾಲಕನಿಗೆ ಕಿವಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ ಬೆಂಗಳೂರು ಟ್ರಾಫಿಕ್ ಪೊಲೀಸ್!