ರೆಬಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರಕ್ಕೂ ಬಾರದ ರಮ್ಯಾಗೆ ಅವರದ್ದೇ ಅಭಿಮಾಣಿಯೊಬ್ಬರು ಬರೆದ ಪತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಪತ್ರದದಲ್ಲಿ ಏನಿದೆ?
ಮಂಡ್ಯ[ನ.29] ಅಂಬಿ ಅಂತ್ಯ ಸಂಸ್ಕಾರಕ್ಕೆ ಬಾರದ ರಮ್ಯಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹಳೆ ಸುದ್ದಿ. ಇದೀಗ ರಮ್ಯಾ ಅಭಿಮಾನಿಯೊಬ್ಬರು ಬರೆದ ಪತ್ರ ಸುದ್ದಿ ಮಾಡುತ್ತಿದೆ. ಹಾಗಾದರೆ ರಮ್ಯಾಗೆ ಅಭಿಮಾನಿ ಬರೆದ ಪತ್ರದಲ್ಲಿ ಏನಿದೆ?
ಗೆ,
ಸನ್ಮಾನ್ಯ ಕುಮಾರಿ ರಮ್ಯಾ(ದಿವ್ಯ ಸ್ಪಂದನ) ರವರು,
ಮಾಜಿ ಸಂಸದರು ಮಂಡ್ಯ ಇಂದ, ಕೋ.ಪು.ಗುಣಶೇಖರ್ ಮಾಜಿ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಸೇವಾದಳ ಮಂಡ್ಯ
ವಿಷಯ ;
"ಇಂದು ನಿಮ್ಮ ಜನ್ಮದಿನ ನಮಗೆ ಬೇಸರದದಿನ ".
1)ಹೃದಯವಂತ ಅಂಬರೀಶ್ ದರ್ಶನ ಮಾಡದ ನೀವು ಕನ್ನಡಿಗರ ದರ್ಶನ ಮಾಡಲು ಅನರ್ಹರು ನಿಮ್ಮಮೇಲಿಟ್ಟಿದ್ದ ನಂಬಿಕೆ ಇಂದು ಸುಳ್ಳು ಮಾಡಿ ಕನ್ನಡಿಗರ ಮನಸ್ಸುಗಳಿಗೆ ನೋವುಂಟು ಮಾಡಿದ್ದೀರಿ
2) ಅಂಬರೀಶ್ ಅವರು ಎಲ್ಲಿದ್ದರೂ ಮಂಡ್ಯ ಜನರನ್ನು ಮರೆಯುತ್ತಿರಲಿಲ್ಲ ಆದ್ದರಿಂದಲೇ ಮಂಡ್ಯದಿಂದ ಇಂಡಿಯಾದ ವರೆವಿಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು
3) ಇನ್ನು ಮುಂದೆ ಇಲ್ಲಿ ಸಲ್ಲದ ನೀವು ಇನ್ನೆಲ್ಲು ಸಲ್ಲೋದಿಲ್ಲ.
4) ಖ್ಯಾತ ಚಿತ್ರನಟ ರೆಬಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದಾಗಿ ಕನ್ನಡಿಗರಿಗೆ ತುಂಬಲಾರದ ನಷ್ಟ ಉಂಟಾಗಿದೆ ಇಂತಹ ಮಹಾನ್ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮವಾಗಿ ಅವರ ದರ್ಶನ ಪಡೆಯಲು ಕನ್ನಡಿಗರು ಸೇರಿದಂತೆ ದೇಶ-ವಿದೇಶಗಳಿಂದ ಲಕ್ಷಾಂತರ ಜನ ಸಾಗರೋಪಾದಿಯಲ್ಲಿ ಭಾಗವಹಿಸಿದ್ದೇ ಇವರ ಹೃದಯವಂತಿಕೆಗೆ ಸಾಕ್ಷಿ, ಸ್ಯಾಂಡಲ್ ವುಡ್,ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಹೆಸರಾಂತ ಖ್ಯಾತ ಕಲಾವಿದರು ಭಾಗವಹಿಸಿದ್ದರು ನೀವು ಭಾಗವಹಿಸದೆ ಸತ್ಯಕ್ಕೆ ದೂರವಾದ ಅಸಂಬದ್ಧವಾದ ಕಾರಣ ನೀಡಿ ವಿನಾಕಾರಣ ಬರದೆ ನಿಮ್ಮಲ್ಲಿರುವ ಕಟುಕತನದ ಮನಸ್ಥಿತಿ ಪ್ರದರ್ಶಿಸಿದ್ದೀರಿ
5) ಚಿತ್ರರಂಗದಲ್ಲಿ ಹಾಗು ರಾಷ್ಟ್ರರಾಜಕಾರಣದವರೆಗೆ ಬೆಳೆಯಲು ಅಂಬರೀಶ್ ರವರ ಸಹಕಾರ ಹಾಗು ಕನ್ನಡಿಗರ ಆಶೀರ್ವಾದದಿಂದ ಬೆಳೆದು ಇಂದು ಅವರುಗಳ ಸಾವುನೋವುಗಳು ಬೇಡವಾದ ನಿಮಗೆ ನಮ್ಮ ಬಹಿಷ್ಕಾರ
6) ಅಂಬರೀಶ್ ಜೊತೆಗೆ ನಿಮಗಾಗಿ ದುಡಿದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆಗೆ ಹಾಗು ಕನಗನಮರಡಿ ಬಸ್ ದುರಂತದಲ್ಲಿ ಮಡಿದವರಿಗೆ ಇಡೀ ದೇಶವೇ ಕಂಬನಿ ಮಿಡಿದರು ನೀವು ಮಾತ್ರ ಯಾರ ಅಂತ್ಯಕ್ರಿಯೆಯಲ್ಲೂ ಭಾಗವಹಿಸದೆ ಮನುಷ್ಯತ್ವವಿಲ್ಲದೆ ಸಾವಿನಲ್ಲೂ ರಾಜಕಾರಣ ಮಾಡುತ್ತಾ ಟ್ವಿಟರ್ ನಲ್ಲಿ ಕಾಲಕಳೆಯುತ್ತಿರುವ ನೀವು ನಮಗೆ ಬೇಡ
7) ನಿಮ್ಮ ತಪ್ಪುಗಳ ಅರಿವು ನನಗಿದ್ದರೂ ಜಿಲ್ಲೆಯ ಸಾರ್ವಜನಿಕರು ಹಾಗು ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಮರ್ಥಿಸಿಕೊಳ್ಲುತ್ತಿದ್ದೆ ಯಾಕೆಂದರೆ ಇಂದು ತಿಳಿದೋ ತಿಳಿಯದೆಯೋ ತಪ್ಪು ಮಾಡಿರಬಹುದು ಮಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತಾರೆಂಬ ವಿಸ್ವಾಸವಿತ್ತು ನಿಮ್ಮಲ್ಲಿರೋದು ವಿಷ ಎಂಬುದನ್ನು ಸಾಬೀತು ಮಾಡಿದ್ದೀರಿ
8) ನಿಮ್ಮ ಹುಟ್ಟು ಹಬ್ಬದಂದು ಪ್ರತೀವರ್ಷ ನಿಮ್ಮ ಹೆಸರಿನಲ್ಲಿ ದೇವರಪೂಜೆ,ವಿಕಲಚೇತನರಿಗೆ,ಅನಾಥಮಕ್ಕಳಿಗೆ ಅನ್ನದಾನ,ವಸ್ತ್ರದಾನ,ಬಡವಿಧ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುತ್ತಿದ್ದೆ , ನಿಮ್ಮ ವಿರೋಧಿಗಳ ಹಾಗು ಪ್ರತಿಪಕ್ಷದವರ ಕುತಂತ್ರಕ್ಕೆ ಪ್ರತಿಯಾಗಿ ನಿಮ್ಮ ಪರವಾಗಿ ನಿಮ್ಮ ಅಸ್ತಿತ್ವ ಉಳಿಸುವುದಕ್ಕಾಗಿ ಕಠಿಣವಾಗಿ ಉತ್ತರಿಸಿ ಪ್ರತಿಭಟಿಸುತ್ತಿದ್ದೆ ಇದರಿಂದಾಗಿ ಜಿಲ್ಲೆಯಾದ್ಯಂತ ಸ್ವಪಕ್ಷಿಯರನ್ನು ಸೇರಿದಂತೆ ವಿರೋಧ ಕಟ್ಟಿಕೊಂಡೆ ನಿಮ್ಮ ಪರವಾಗಿ ಮಾಡಿದ ಹೋರಾಟವೆಲ್ಲ ಇಂದು ವ್ಯರ್ಥವಾಗಿದೆ ಇಂದು ನಮಗೆ ನಿಮ್ಮ ಜನ್ಮದಿನವಲ್ಲ ಕರಾಳದಿನ ನಿಮಗೆ ನನ್ನ ಕೊನೆಯ ನಮಸ್ಕಾರ..’