ನಲಪಾಡ್​ ಹ್ಯಾರಿಸ್ ಪರ ಸ್ಯಾಂಡಲ್’ವುಡ್ ನಟಿ ಬ್ಯಾಟಿಂಗ್

By Suvarna Web DeskFirst Published Feb 21, 2018, 6:59 PM IST
Highlights

ರೌಡಿಸಂ ಮಾಡಿ ನಲಪಾಡ್ ಮೊಹಮ್ಮದ್ ಇದೀಗ ಜೈಲು ಪಾಲಾಗಿದ್ದು, ಸ್ಯಾಂಡಲ್’ವುಡ್ ನಟಿಯೊಬ್ಬರು ಶಾಸಕ ಎನ್.ಎ.ಹ್ಯಾರಿಸ್ ಪರ ನಟಿ ಬ್ಯಾಟಿಂಗ್ ಮಾಡಿದ್ದಾರೆ.

ಬೆಂಗಳೂರು: ರೌಡಿಸಂ ಮಾಡಿ ನಲಪಾಡ್ ಮೊಹಮ್ಮದ್ ಇದೀಗ ಜೈಲು ಪಾಲಾಗಿದ್ದು, ಸ್ಯಾಂಡಲ್’ವುಡ್ ನಟಿಯೊಬ್ಬರು ಶಾಸಕ ಎನ್.ಎ.ಹ್ಯಾರಿಸ್ ಪರ ನಟಿ ಬ್ಯಾಟಿಂಗ್ ಮಾಡಿದ್ದಾರೆ.

ನಟಿ ಸಂಜನಾ ಗರ್ಲಾನಿ ಶಾಸಕ ಹ್ಯಾರಿಸ್​ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ವಿದ್ವತ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಲಪಾಡ್, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇತ್ತ ಕಡೆ ಟ್ವಿಟರ್​​ನಲ್ಲಿ ನಿಂತ ನಟಿ ​ಸಂಜನಾ ಶಾಸಕ ಹ್ಯಾರಿಸ್ ​ಬೆಂಬಲಕ್ಕೆ ನಿಂತಿದ್ದಾರೆ.

My sympathies to ji,a very efficient leader is paying a price for no fault of his own but rather for his son ! has been a very sincere leader for about 2 decades now,before we could witness this entire tamasha by !

— Sanjjjanaa galrani❤️ (@sanjjanagalrani)

‘ಶಾಸಕ ಹ್ಯಾರಿಸ್​ ಒಬ್ಬ ಉತ್ತಮ ರಾಜಕಾರಣಿ, ಹ್ಯಾರಿಸ್​ರದ್ದು ಯಾವುದೇ ತಪ್ಪಿಲ್ಲದಿದ್ದರೂ, ಮಗ ಮಾಡಿದ ತಪ್ಪಿಗೆ ಹ್ಯಾರಿಸ್​ ಬೆಲೆ ತೆರುವಂತಾಗಿದೆ, ಎಂದು ನಟಿ ಟ್ವೀಟಿಸಿದ್ದಾರೆ.

‘2 ದಶಕಗಳಿಂದಲೂ ಉತ್ತಮ ಕೆಲಸ ಮಾಡುತ್ತಿರುವ ಶಾಸಕ ಹ್ಯಾರಿಸ್, ವಿದ್ವತ್​ ಮೇಲಿನ ಹಲ್ಲೆ ಬಳಿಕ ಇಂಥದನ್ನೆಲ್ಲಾ ನೋಡಬೇಕಾಗಿದೆ’, ಎಂದು ಸಂಜನಾ ಹೇಳಿದ್ದಾರೆ.

click me!