
ಬೆಂಗಳೂರು, [ಡಿ.23]: ಸ್ಯಾಂಡಲ್ ವುಡ್ ನಟಿ ಅಕ್ಷತಾ ಶ್ರೀಧರ್ ಶಾಸ್ತ್ರಿಗೆ ಮಾಲಿವುಡ್ ಚಿತ್ರ ತಂಡ ಕಿರುಕುಳ ನೀಡಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಕಳೆದ ವಾರ ‘ಕೊಚ್ಚಿನ್ ಶಾಧಿ ಚೆನ್ನೈ ಜಿರೋ ತ್ರಿ’ ಅನ್ನೋ ಸಿನಿಮಾ ಶೂಟಿಂಗ್ಗೆ ಹೋಗಿದ್ದ ಅಕ್ಷತಾ, ಹೋಟೆಲ್ ರೂಂ ಕ್ಲೀನ್ ಇಲ್ಲ ಅನ್ನೋ ವಿಚಾರಕ್ಕೆ ಸಿಬ್ಬಂದಿ ಜೊತೆ ಗಲಾಟೆಯಾಗಿದೆ.
ಮಾತಿಗೆ ಮಾತು ಬೆಳೆದು ನಟಿ ಅಕ್ಷತಾ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ಮಾಡಿ ಕಿರುಕುಳ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ವೇಳೆ ಶೂಟಿಂಗ್ ಗೆ ಕರೆಸಿದ ಚಿತ್ರತಂಡವೂ ಕೂಡ ಅಕ್ಷತಾ ಬೆಂಬಲಕ್ಕೆ ಬರದೆ, ಅಕ್ಷತಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
56 ಸಾವಿರ ರೂಪಾಯಿ ಹೋಟೆಲ್ ಬಿಲ್ ಕಟ್ಟಿ ವಾಪಸ್ಸಾಗಿದ್ದ ನಟಿ ಅಕ್ಷತಾ, ಬೆಂಗಳೂರು ಪೊಲೀಸ್ ಕಮಿಷನರ್ ಹಾಗೂ ಕರ್ನಾಟಕ ಫಿಲಂ ಚೇಂಬರ್ ಗೂ ಮೌಖಿಕ ದೂರು ನೀಡಿದ್ದಾರೆ. ತ್ರಾಟಕ, ಪಾನಿಪುರಿ, ರಾಜೀವ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅಕ್ಷತಾ ಈ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.