
ಗದಗ (ಮಾ.25): ಗದಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ದಂಧೆಕೋರರ ಕೈಗೆ ಸಿಲುಕಿ ತುಂಗೆಯ ಒಡಲು ಬರಿದಾಗುತ್ತಿದೆ. ಇಷ್ಟೆಲ್ಲಾ ಅಕ್ರಮ ಕಣ್ಮುಂದೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅಷ್ಟೆ ಅಲ್ಲ ಅಕ್ರಮ ಮರಳು ತುಂಬಿದ್ದ ಲಾರಿಗಳಿಗೆ ಪೊಲೀಸ್ ಠಾಣೆಯೇ ಪಾರ್ಕಿಂಗ್ ಆಗಿದೆ.
ತುಂಗಾಭದ್ರ ನದಿ ತಟದಲ್ಲಿರುವ ಮುಂಡರಗಿ, ಹೆಸರೂರ, ಕಕ್ಕೂರ ತಾಂಡಾ, ರಾಮೇನಹಳ್ಳಿ, ಹಮ್ಮಿಗಿ, ಸಿಂಗಟಾಲೂರ ಸೇರಿದಂತೆ ಹಲವೆಡೆ ಮರಳು ಸಾಗಿಸಲಾಗುತ್ತಿದೆ. ವಿಪರ್ಯಾಸ ಅಂದ್ರೆ ಮರಳು ತುಂಬಿದ ಲಾರಿಗಳು ಪೊಲೀಸ್ ಠಾಣೆ ಎದುರೇ ನಿಂತರೂ ಪೊಲೀಸರು ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಗಾಢನಿದ್ರೆಯಲ್ಲಿರುತ್ತಾರೆ. ಈ ಅಕ್ರಮ ದಂಧೆಗೆ ಮುಂಡರಗಿ ಸಿಪಿಐ ಮಂಜುನಾಥ ನಡುವಿನ ಮನಿ ಸಾಥ್ ಇದೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲೇ ನೂರಾರು ಲಾರಿಗಳು ಮರಳು ಹೇರಿಕೊಂಡು ನಿಂತಿದ್ರೆ, ಇತ್ತ ಪೊಲೀಸ್ರು ಮಾತ್ರ ಪೊಲೀಸ್ ಠಾಣೆಗೆ ಬೀಗ ಹಾಕಿಕೊಂಡ ಗಡದ್ ನಿದ್ರೆಯಲ್ಲಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ಮಾರ್ಚ್ 23ರಂದು ಸೀಜ್ ಮಾಡಿರೋದು ಅಕ್ರಮವಾಗಿ ಜಮೀನಿನಲ್ಲಿ ಸಂಗ್ರಹಿಸಿದ 52 ಟ್ರಿಪ್ ಮರಳು ಲೋಡ್ ಮಾತ್ರ. ಆದರೆ ನೂರಾರು ಲಾರಿಗಳ ಮರಳು ತುಂಬಿಕೊಂಡು ಹೇಗೆ ನಿಂತಿವೆ ಎಂಬ ಪ್ರಶ್ನೆ ಉದ್ಭವಿಸುತ್ತೆ. ಲಾರಿ ಸಮೇತ ಮರಳು ಸಿಕ್ಕರೆ ಕೇಸ್ ಮಾಡಲೇಬೇಕು ಅನ್ನೋದು ಗಣಿ ಇಲಾಖೆ ಅಧಿಕಾರಿಗಳ ಮಾತು. ಆದ್ರೆ, ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.