ಎಚ್ಚರ...! ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ರದ್ದು?

Published : Mar 25, 2017, 07:12 AM ISTUpdated : Apr 11, 2018, 12:51 PM IST
ಎಚ್ಚರ...! ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ರದ್ದು?

ಸಾರಾಂಶ

ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈಗಾಗಲೇ ಪ್ಯಾನ್‌ ಕಾರ್ಡ್‌ ಹೊಂದಿದವರಿಗೂ ಆಧಾರ್‌ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ(ಮಾ.25):  ಆದಾಯ ತೆರಿಗೆ ಪಾವತಿ, ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈಗಾಗಲೇ ಪ್ಯಾನ್‌ ಕಾರ್ಡ್‌ ಹೊಂದಿದವರಿಗೂ ಆಧಾರ್‌ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಡಿ.31ರೊಳಗೆ ಪ್ಯಾನ್‌ ಕಾರ್ಡ್‌ ನಂಬರ್‌ಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡದೇ ಇದ್ದಲ್ಲಿ, ಅಂತಹ ಪ್ಯಾನ್‌ ಕಾರ್ಡ್‌ಗಳ ಮಾನ್ಯತೆ ರದ್ದು ಪಡಿಸುವಂತಹ ಕ್ರಮವೊಂದನ್ನು ಜಾರಿಗೆ ತರಲು ಸಜ್ಜಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು ತೆರಿಗೆ ಪಾವತಿ ವೇಳೆ ಕಡ್ಡಾಯವಾಗಿ ಪ್ಯಾನ್‌ ಸಂಖ್ಯೆ ನಮೂದಿಸಬೇಕಾಗಿದೆ. ವಿದ್ಯಾರ್ಥಿಗಳಂ ತಹ ತೆರಿಗೆ ವ್ಯಾಪ್ತಿಗಿಂತ ಹೊರಗಿರುವ ವ್ಯಕ್ತಿಗಳು ಗುರುತಿನ ಪುರಾವೆಯಾಗಿ ಪ್ಯಾನ್‌ ಕಾರ್ಡ್‌ ಬಳ ಸುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಅಕ್ರಮವಾಗಿ ಪ್ಯಾನ್‌ ಕಾರ್ಡ್‌ ಪಡೆದುಕೊಂಡಿದ್ದಾರೆ. ಆಧಾರ್‌ ಜತೆ ಜೋಡಣೆ ಮಾಡಿದರೆ ಒಬ್ಬೊ ಬ್ಬರೇ ಹಲವು ಪ್ಯಾನ್‌ ಕಾರ್ಡ್‌ ಹೊಂದಿರುವ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಆಧಾರ್‌ ಇಲ್ಲದಿದ್ದರೆ ಸಿಮ್‌ ಕಾರ್ಡ್‌ ಇಲ್ಲ

ಮೊಬೈಲ್‌ ಸಿಮ್‌ ಪಡೆಯಲೂ ಆಧಾರ್‌ ನೀಡುವುದು ಶೀಘ್ರ ಕಡ್ಡಾಯವಾಗಲಿದೆ. ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ನೋಟಿಸ್‌ ಜಾರಿ ಮಾಡಿದ್ದು, ಗ್ರಾಹಕರ ಸಿಮ್‌ಕಾರ್ಡ್‌ಗಳನ್ನು ಆಧಾರ್‌ ಜೊತೆ ಸಂಯೋಜನೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಹಾಲಿ ಗ್ರಾಹಕರಿಗೂ ಈ ನಿಯಮ ಅನ್ವಯವಾಗಲಿದೆ. ಟೆಲಿಕಾಂ ಕಂಪನಿಗಳು ತನ್ನ ಎಲ್ಲಾ ಗ್ರಾಹಕರ ದಾಖಲೆಗಳನ್ನು ಮರು ಪರಿಶೀಲನೆ ನಡೆಸಲಿವೆ. ಪ್ರಿಪೇಡ್‌ ಮತ್ತು ಪೋಸ್ಟ್‌ಪೇಡ್‌ ಗ್ರಾಹಕರು ಆಧಾರ್‌ ಕೆವೈಸಿ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕಾಗುತ್ತದೆ. ಎಸ್‌ಎಂಎಸ್‌ ಮೂಲಕ ಪರಿಶೀಲನಾ ಪ್ರಕ್ರಿಯೆ ನಡೆಯಲಿದ್ದು, ಗ್ರಾಹಕರಿಗೆ ಕಂಪನಿಗಳು ಪ್ರಮಾಣೀಕರಣ ಕೋಡ್‌ಗಳನ್ನು ಕಳುಹಿಸಿಕೊಡಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರನ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ!
ಕಂಟೋನ್ಮೆಂಟ್‌ ರೈಲು ನಿಲ್ದಾಣದ 371 ಮರ ಕಡಿಯಲು ಹೈಕೋರ್ಟ್‌ ತಡೆ, ತನ್ನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲವೆಂದು ಆರ್ಡರ್