
ಬೆಳಗಾವಿ (ಜ.10): ರಾಜ್ಯದಲ್ಲಿ ಮರಳು ಮಾಫಿಯಾಗೆ ತೆರೆ ಎಳೆಯಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಅದಕ್ಕಾಗಿಯೇ ಮಲೇಶಿಯಾದಿಂದ ಮರಳನ್ನ ಆಮದು ಮಾಡಿಕೊಂಡು ಜನರಿಗೆ ವಿತರಿಸುತ್ತಾ ಇದೆ. ಆದ್ರೆ, ಇನ್ನೂ ಫಿಲ್ಟರ್ ಮರಳು ಮಾಫಿಯಾ ಮಾತ್ರ ನಿಂತಿಲ್ಲ.
ಬೆಳಗಾವಿ ಹೃದಯ ಭಾಗವಾದ ಗಾಂಧಿನಗರದಲ್ಲಿ ಎಗ್ಗಿಲ್ಲದೆ ಫಿಲ್ಟರ್ ಮರಳು ಮಾಫಿಯಾ ತನ್ನ ಅಷ್ಟಭಾವುಗಳನ್ನು ತೆರದಿದೆ. ಜನರಿಗೆ ಇದು ಮಹಾರಾಷ್ಟ್ರದ ರಾಜಗೋಳಿ ಮರಳು, ಇದು ಗೋಕಾಕ್ ಘಟಪ್ರಭಾ ನದಿ ಮರಳು, ಇದು ರಾಮದುರ್ಗ ಮಲಪ್ರಭಾ ನದಿ ಮರಳು ಎಂದು ಜನರನ್ನು ಮರಳು ಮಾಡಿ ಒಂದು ಲಾರಿಗೆ 17 ರಿಂದ 30 ಸಾವಿರದವರೆಗೆ ಮಾರಾಟ ಮಾಡುತ್ತಾರೆ. ಇಲ್ಲಿ ಮಾಫಿಯಾ ಯಾವ ಮಟ್ಟಿಗೆ ಇದೆ ಅಂದ್ರೆ ಹಗಲಲ್ಲೇ ಇಲ್ಲಿ ಫಿಲ್ಟರ್ ಮಾರಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಇಲ್ಲಿ ಸುಮಾರು 300 ಲಾರಿ ಮರಳು ಮಾರಾಟವಾಗುತ್ತಿದ್ದು ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾಗಿರೋ ರಾಜಧನ, ಜಿಎಸ್ಟಿ ಸೇರಿ ಪ್ರತಿನಿತ್ಯ ಸುಮಾರು 10 ಕೋಟಿ ರೂ. ಖೋತಾ ಆಗುತ್ತಿದೆ.
ನಗರದಲ್ಲಿ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ಸುಮಾರು 5 ಠಾಣೆಗಳಿಗೆ ಈ ಫಿಲ್ಟರ್ ಮಾಫಿಯಾದ ಕರಾಳ ಬಾಹು ಹಬ್ಬಿದೆ. ಅಲ್ಲದೆ ಇದಕ್ಕೆ ಪೊಲೀಸರೇ ಸಹಕರಿಸುತ್ತಿದ್ದು ಮಹಾರಾಷ್ಟ್ರ ದಿಂದ ಮಣ್ಣು ತಂದು ಅದನ್ನು ನೀರಿನಲ್ಲಿ ತೊಳೆಯುವ ದೃಶ್ಯ ಪೊಲೀಸರ ಕಣ್ಣು ಮುಂದೆ ಎಗ್ಗಿಲ್ಲದೆ ನಡೆಯತ್ತಿರೋದು ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.