ರಾಹುಲ್ ಪಟ್ಟಾಭಿಷೇಕದ ವೇಳೆ ಮನಮೋಹನ್ ಸಿಂಗ್ ಮನದಾಳದ ಮಾತು

Published : Dec 16, 2017, 11:40 AM ISTUpdated : Apr 11, 2018, 12:44 PM IST
ರಾಹುಲ್ ಪಟ್ಟಾಭಿಷೇಕದ ವೇಳೆ ಮನಮೋಹನ್ ಸಿಂಗ್ ಮನದಾಳದ ಮಾತು

ಸಾರಾಂಶ

ಸಮರ್ಥವಾಗಿ ಅಧ್ಯಕ್ಷ ಪಟ್ಟವನ್ನು ಇಲ್ಲಿಯವರೆಗೆ ನಿಭಾಯಿಸಿದ ಸೋನಿಯಾ ಜಿ ಅವರಿಗೆ ನಮ್ಮ ಸಲ್ಯೂಟ್, ಅವರಂತೆಯೇ ರಾಹುಲ್ ಗಾಂಧಿ ಅವರೂ ಕೂಡ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವ ಭರವಸೆ ನಮ್ಮಲ್ಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ನವದೆಹಲಿ (ಡಿ.16): ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಪಟ್ಟಾಭಿಷೇಕ ನೆರವೇರಿಸಲಾಗುತ್ತಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ರಾಹುಲ್ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಈ ವೇಳೆ  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದಾರೆ.

ಗಣ್ಯರ ಸಮ್ಮುಖದಲ್ಲಿ ನಡೆಯುತ್ತಿರುವ  ಕಾರ್ಯಕ್ರಮದಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷತೆ ವಹಿಸುತ್ತಿದ್ದಾರೆ.

ದೇಶದಾದ್ಯಂತ ಬಡತನ ಹೆಚ್ಚಿನ ಪ್ರಮಾಣದಲ್ಲಿದೆ. ಈ ಅನೇಕ ಸಮಸ್ಯೆಗಳು ದೇಶದಲ್ಲಿವೆ. ಈ ಸಮಸ್ಯೆಗಳನ್ನೆಲ್ಲಾ ರಾಹುಲ್ ನೇತೃತ್ವದಲ್ಲಿ ಪಕ್ಷವು ನಿವಾರಿಸುವ ಬಗ್ಗೆ ಗಮನವನ್ನು ಹರಿಸಲಿದೆ.

ಸಮರ್ಥವಾಗಿ ಅಧ್ಯಕ್ಷ ಪಟ್ಟವನ್ನು ಇಲ್ಲಿಯವರೆಗೆ ನಿಭಾಯಿಸಿದ ಸೋನಿಯಾ ಜಿ ಅವರಿಗೆ ನಮ್ಮ ಸಲ್ಯೂಟ್, ಅವರಂತೆಯೇ ರಾಹುಲ್ ಗಾಂಧಿ ಅವರೂ ಕೂಡ ನಿಭಾಯಿಸಿಕೊಂಡು ಹೋಗಲಿದ್ದಾರೆ ಎನ್ನುವ ಭರವಸೆ ನಮ್ಮಲ್ಲಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟಾತ್ತಾರೆ, 1500 ಜನಸಂಖ್ಯೆಯ ಇಲ್ಲಿ 3 ತಿಂಗಳ ಜನನ 27,000
ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!