ಅಪ್ಪ - ಅಮ್ಮನ ನೋಡಿಕೊಳ್ಳದ ಸರ್ಕಾರಿ ನೌಕರರ ಸಂಬಳ ಕಟ್

By Web DeskFirst Published Jul 28, 2018, 3:59 PM IST
Highlights

ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಇದೀಗ ಕಟ್ಟು ನಿಟ್ಟಿನ ಆದೇಶವೊಂದನ್ನು ಹೊರಡಿಸಿದೆ. ಪೋಷಕರನ್ನು ನೋಡಿಕೊಳ್ಳದಿದ್ದಲ್ಲಿ ನಿಮ್ಮ ಸಂಬಳ ಕಟ್ ಆಗಲಿದೆ. 

ಗುವಾಹಟಿ :  ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಇದೀಗ ಕಟ್ಟು ನಿಟ್ಟಿನ ಆದೇಶವೊಂದನ್ನು ಹೊರಡಿಸಿದೆ. ಪೋಷಕರು ಹಾಗೂ ಅಂವೈಕಲ್ಯ ಹೊಂದಿದ ಸಹೋದರರನ್ನು ನೋಡಿಕೊಳ್ಳದಿದ್ದಲ್ಲಿ ಅವರ ಸಂಬಳದಲ್ಲಿ ಶೇ.10 ರಿಂದ ಶೇ. 15ರಷ್ಟು ಕಡಿತ ಮಾಡಲಿದೆ. 

ಯಾವುದೇ ಆದಾಯವನ್ನು ಹೊಂದದೇ ಸರ್ಕಾರಿ ಉದ್ಯೋಗದಲ್ಲಿರುವ ತಮ್ಮವರನ್ನೇ ನಂಬಿಕೊಂಡಿದ್ದು ಅವರನ್ನು ನೋಡಿಕೊಳ್ಳದಿದ್ದಲ್ಲಿ ಸಂಬಳದಲ್ಲಿ ಕಡಿತವಾಗಲಿದೆ. 

ಇನ್ನು ಸರ್ಕಾರಿ ನೌಕರಿಯಲ್ಲಿದ್ದವರು  ದೈಹಿಕ ನ್ಯೂನತೆ ಹೊಂದಿದ ತಮ್ಮ ಸಹೋದರ ಸಹೋದರಿಯರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಹಣಕಾಸು ಸಚಿವ ಹಿಮಂತಾ ಬಿಸ್ವಾ ಸರ್ಮಾ ಹೇಳಿದ್ದಾರೆ. 

ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೆ ತಂದಿದೆ.  ಇದಕ್ಕೆ ಪ್ರಣಮ್ ಕಾಯ್ದೆ ಎಂದು ಹೆಸರಿಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

click me!