ಸೆಲ್ಫಿ ದುರಂತಗಳ ತಡೆಗೆ ಬಂದಿದೆ ಸೇಫ್ಟಿ ಆ್ಯಪ್

By Web DeskFirst Published Oct 29, 2018, 11:59 AM IST
Highlights

ಸುಂದರ ಸೆಲ್ಫಿ ತೆಗೆದುಕೊಳ್ಳಲು ಸಹಾಯ ಮಾಡುವುದಕ್ಕೆ ಸಾಕಷ್ಟು ಆ್ಯಪ್‌ಗಳು ಸಿಗುತ್ತವೆ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸಬ ಹುದಾದ ಅಪಾಯದ ಕುರಿತು ಎಚ್ಚರಿಕೆ ನೀಡಲು, ತನ್ಮೂಲಕ ಸಾವಿನಿಂದ ಪಾರು ಮಾಡಲು ಹೊಸ ಆ್ಯಪ್‌ವೊಂದು ಮಾರು ಕಟ್ಟೆಗೆ ಬಂದಿದೆ. 

ನವದೆಹಲಿ (ಅ. 29): ಸುಂದರ ಸೆಲ್ಫಿ ತೆಗೆದುಕೊಳ್ಳಲು ಸಹಾಯ ಮಾಡುವುದಕ್ಕೆ ಸಾಕಷ್ಟು ಆ್ಯಪ್‌ಗಳು ಸಿಗುತ್ತವೆ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸಬ ಹುದಾದ ಅಪಾಯದ ಕುರಿತು ಎಚ್ಚರಿಕೆ ನೀಡಲು, ತನ್ಮೂಲಕ ಸಾವಿನಿಂದ ಪಾರು ಮಾಡಲು ಹೊಸ ಆ್ಯಪ್‌ವೊಂದು ಮಾರು ಕಟ್ಟೆಗೆ ಬಂದಿದೆ.

ಸೆಲ್ಫಿ ಗೀಳಿನಿಂದಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ಸಂಶೋಧಕರು ‘ಸಾಫ್ಟಿ’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡುವ ಈಆ್ಯಪ್, ಮೊಬೈಲ್ ಬಳಕೆದಾರರು ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದಂತೆ ಆ ಕ್ಷಣಕ್ಕೆ ಆ ಚಿತ್ರವನ್ನು ವಿಶ್ಲೇಷಣೆಗೆ ಒಳಪಡಿಸುತ್ತದೆ.

ಬಳಕೆದಾರ ಎಷ್ಟು ಎತ್ತರದಲ್ಲಿ ನಿಂತಿದ್ದಾನೆ, ಬಳಕೆದಾರನ ಹಿಂಬದಿ ಏನಿದೆ ಎಂಬುದನ್ನೆಲ್ಲಾ ಗಮನಿಸುತ್ತದೆ. ಒಂದು ವೇಳೆ ಬಳಕೆದಾರ ರೈಲು ಹಳಿ, ಜಲಮೂಲ ಅಥವಾ ಪ್ರಾಣಿಯ ಸಮೀಪ ನಿಂತಿದ್ದರೆ ಸೆಲ್ಫಿ ತೆಗೆಯುವಾಗಲೇ ನೋಟಿಫಿಕೇಷನ್ ಬರುತ್ತದೆ. ‘ನೀವು ಅಸುರಕ್ಷಿತ ಸ್ಥಳದಲ್ಲಿದ್ದೀರಿ’ ಎಂದು ಎಚ್ಚರಿಸುತ್ತದೆ. 

click me!