
ಹುಳಿಯಾರು: 2021ರವರೆಗೆ ಉತ್ತಮ ಮಳೆಯಾಗುವುದಿಲ್ಲ ಎನ್ನು ವ ಮೂಲಕ ಈಗಾಗಲೇ ಮಳೆ ಬೆಳೆಯಿಲ್ಲದೆ ಕಂಗಾ ಲಾಗಿರುವ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸುವ ಭವಿಷ್ಯವನ್ನು ನಾಗಸಾಧು ಕಪಾಲಿಬಾಬಾ ನುಡಿದಿದ್ದಾರೆ.
ಹುಳಿಯಾರಿನ ಕೋಡಿಪಾಳ್ಯದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಂಕಾಳಿ ಹಾಗೂ ತುಳಜಾ ಭವಾನಿ ದೇವಸ್ಥಾನದ ಲೋಕಾರ್ಪಣಾ ಮಹೋತ್ಸವಕ್ಕೆ ಹಿಮಾಲಯದಿಂದ 20 ಮಂದಿ ನಾಗಸಾಧುಗಳು ಆಗಮಿಸಿದ್ದು ಇವರ ಮುಖ್ಯಸ್ಥ ಕಪಾಲಿ ಬಾಬು ಸುದ್ದಿಗಾರರೊಂದಿಗೆ ಮಾತನಾಡಿ ಪಂಚಾಂಗ ಹಿಡಿದು ದೇಶದ ಭವಿಷ್ಯ ನುಡಿದಿದ್ದಾರೆ.
2015ರಲ್ಲಿ ಮಳೆ ಬರುವುದಾಗಿ ಹೇಳಿದ್ದೆ ಅದ ರಂತೆ ಉತ್ತಮ ಮಳೆ ಆಗಿದೆ. ಆದರೆ 2017ರಲ್ಲಿ ಬುಧರಾಜನಾಗಿ ಗುರು ಮಂತ್ರಿಯಾಗಿದ್ದು ಬೆಂಕಿ ಅವಘಡ ಸಂಭವಿಸುವ, ಖಾಯಿಲೆಗಳು ಹೆಚ್ಚಾಗುವ ದೇಶದ ನೇತಾರರೊಬ್ಬರು ಸಾವನ್ನಪ್ಪುವ ಸಂಭವವಿದೆ. ಜೂ.24ರಿಂದ ಜು.9ರೊಳಗೆ ಈ ಅವಘಡ ಸಂಭವಿಸಲಿದ್ದು ರಾಜನೊಬ್ಬ ಸಾವನ್ನಪ್ಪುತ್ತಾರೆ ಎಂದ ರಲ್ಲದೆ 2021 ಮತ್ತು 27ರಲ್ಲಿ ಅತಿವೃಷ್ಠಿಯಾಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.