ಒಡೆಯರ್ ಫೌಂಡೇಷನ್ ಲೋಕಾರ್ಪಣೆ

By Web DeskFirst Published Jun 3, 2019, 9:45 AM IST
Highlights

ಒಡೆಯರ್ ಫೌಂಡೇಷನ್ ಲೋಕಾರ್ಪಣೆ |  ಮೈಸೂರು ರಾಜವಂಶಸ್ಥರಿಂದ ಸ್ಥಾಪನೆ | ಸದ್ಗುರು ಜಗ್ಗಿ  ವಾಸುದೇವ್ ಚಾಲನೆ 

ಮೈಸೂರು (ಜೂ. 03): ರಾಜ ಮನೆತನದ ವತಿಯಿಂದ ಸ್ಥಾಪಿಸಲಾಗಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಅನ್ನು ಸದ್ಗುರು ಜಗ್ಗಿ ವಾಸುದೇವ್ ಲೋಕಾರ್ಪಣೆ
ಮಾಡಿದರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫೌಂಡೇಷನ್ ಅನ್ನು ಲೋಕಾರ್ಪಣೆಗೊಳಿಸಿದ ಜಗ್ಗಿ ವಾಸುದೇವ್ ಅವರು ಬಳಿಕ ಆಶೀರ್ವಚನ ನೀಡಿದರು.

ಮೊದಲಿಗೆ ಫೌಂಡೇಷನ್ ಕುರಿತು ವಿವರಣೆ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ರಾಜಮನೆತನಕ್ಕೆ ಸೇರಿದ ಪಾರಂಪರಿಕ ಕಟ್ಟಡಗಳ ನವೀಕರಣ, ಸಾಮಾಜಿಕ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳಲು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಸ್ಥಾಪಿಸಲಾಗಿದೆ. ಇದರಡಿಯಲ್ಲಿ ಈಗ ಜಗನ್ಮೋಹನ ಅರಮನೆ ನವೀಕರಣ, ಚಾಮರಾಜ ಆರ್ಟ್ ಗ್ಯಾಲರಿ ನವೀಕರಿಸಲಾಗಿದೆ.

ಮುಂದಿನ ದಿನಗಳಲ್ಲಿ ಗನ್ ಹೌಸ್, ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ಅರಮನೆಯ ಆವರಣದಲ್ಲಿರುವ ಆಂಜನೇಯ ದೇವಸ್ಥಾನ ಇತ್ಯಾದಿ ಪಾರಂಪರಿಕ ಕಟ್ಟಡಗಳ ನವೀಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, ಸುದೀರ್ಘವಾಗಿ ಮೈಸೂರು ಪ್ರಾಂತ್ಯವನ್ನು ಆಳಿದ ರಾಜವಂಶಸ್ಥರು ತಾವು ಗಳಿಸಿದ ಹಣ- ಆಸ್ತಿಯನ್ನು ಸ್ವಂತಕ್ಕೆ ಬಳಸದೆ ಸಮಾಜದ
ಅಭಿವೃದ್ಧಿಗೆ ವಿನಿಯೋಗಿಸಿದರು. ದಾನದಲ್ಲಿ ಮೈಸೂರು ರಾಜರು ಪ್ರಸಿದ್ಧರು ಎಂದು ಸ್ಮರಿಸಿದರು. ರಾಜವಂಶಸ್ಥರಾದ ವಿಶಾಲಾಕ್ಷಿದೇವಿ ಮತ್ತಿತರರು ಹಾಜರಿದ್ದರು.

 

click me!