ಪಕ್ಷದಿಂದ ನನ್ನನ್ನು ಇವತ್ತೇ ಕಿತ್ತಾಕಿ !

Published : Feb 19, 2017, 11:22 AM ISTUpdated : Apr 11, 2018, 12:37 PM IST
ಪಕ್ಷದಿಂದ ನನ್ನನ್ನು ಇವತ್ತೇ ಕಿತ್ತಾಕಿ !

ಸಾರಾಂಶ

ನಾನೇನು ತಪ್ಪು ಮಾಡಿದೆ? ಮುಖ್ಯಮಂತ್ರಿಗೆ ಸಲಹೆ ನೀಡಿದ್ದು, ಪಕ್ಷ ಉಳಿಸಿ ಎಂದಿದ್ದು ತಪ್ಪಾ? ಆದರೆ ಸಿದ್ದರಾಮಯ್ಯ ಮಾಡಿದ್ದೇನು? ಈಗ ನೋಟಿಸ್‌ ಬರುವುದನ್ನೇ ಕಾಯುತ್ತಿದ್ದೇನೆ.

ಮಂಗಳೂರು(ಫೆ.19): ‘ನನ್ನನ್ನು ಇವತ್ತೇ ಪಕ್ಷದಿಂದ ತೆಗೆಯಲಿ. ನನಗೆ ಸಂತೋಷವೇ. ಪಕ್ಷದಿಂದ ಕಿತ್ತೆಸೆದರೂ ನಾನು ಉಲ್ಟಾಹೊಡೆಯಲ್ಲ. ನನ್ನ ಧೋರಣೆ ಸತ್ತರೂ ಬದಲಾಗಲ್ಲ' ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನು ತಪ್ಪು ಮಾಡಿದೆ? ಮುಖ್ಯಮಂತ್ರಿಗೆ ಸಲಹೆ ನೀಡಿದ್ದು, ಪಕ್ಷ ಉಳಿಸಿ ಎಂದಿದ್ದು ತಪ್ಪಾ? ಆದರೆ ಸಿದ್ದರಾಮಯ್ಯ ಮಾಡಿದ್ದೇನು? ಈಗ ನೋಟಿಸ್‌ ಬರುವುದನ್ನೇ ಕಾಯುತ್ತಿದ್ದೇನೆ. ಆದರೆ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಸಿದ್ದರಾಮಯ್ಯ ಜನತಾದಳ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಅವರಿಗೆ 1 ರೂಪಾಯಿಗೆ ಅಕ್ಕಿ ನೀಡಲು ಸಲಹೆ ನೀಡಿದ್ದೆ. ಆದರೆ ಅವರು ಒಪ್ಪಿರಲಿಲ್ಲ. ಆಗಲೇ ‘ನಾನು ನಿಮ್ಮನ್ನು ಬಿಡುವುದಿಲ್ಲ' ಎಂದಿದ್ದೆ. ಹೀಗೆ ಹೇಳಿಲ್ಲ ಎಂದು ಧರ್ಮಸ್ಥಳ ಅಥವಾ ಕುದ್ರೋಳಿಗೆ ಬಂದು ಪ್ರಮಾಣ ಮಾಡಲಿ ನೋಡೋಣ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಂಗಮ: ಶ್ರೀ ಶ್ರೀ ರವಿಶಂಕರ್ ನೇತೃತ್ವದಲ್ಲಿ 1.21 ಕೋಟಿ ಜನರಿಂದ ಏಕಕಾಲಕ್ಕೆ ಧ್ಯಾನ!
ಶೇಖ್ ಹಸೀನಾ ವಿರೋಧಿ ಬಣದ ಮತ್ತೊಬ್ಬ ನಾಯಕನ ಮೇಲೆ ಬಾಂಗ್ಲಾದಲ್ಲಿ ದಾಳಿ, ಮನೆಯ ಒಳಗಿದ್ದಾಗಲೇ ತಲೆಗೆ ಬಿತ್ತು ಗುಂಡು!