(ವಿಡಿಯೋ)ಹೆಲ್ಮೆಟ್ ಇಲ್ಲದವರಿಗೆ ಬುದ್ಧಿವಾದ: ಸೆಲ್ಫಿ ಕೊಟ್ಟು ಆಣೆ ಮಾಡಿಸಿಕೊಂಡ ಸಚಿನ್

By Suvarna Web DeskFirst Published Apr 9, 2017, 3:42 PM IST
Highlights

ಸೆಲೆಬ್ರೆಟಿಗಳು ಸಾರ್ವಜನಿಕರ ಬಳಿ ಮಾತಾಡುವುದೇ ಕಷ್ಟ. ಅಂತಹುದರಲ್ಲಿ ಹೆಲ್ಮೆಟ್ ಹಾಕದೇ ಪ್ರಯಾಣಿಸುತ್ತಿದ್ದ ತನ್ನ ಅಭಿಮಾನಿಗೆ, ಹೆಲ್ಮೆಟ್ ಪ್ರಾಮುಖ್ಯತೆ ಮತ್ತು ಜೀವದ ಮಹತ್ವ ತಿಳಿಸಿ, ಇನ್ಮುಂದೆ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತೇನೆ ಎಂದು ನನಗೆ ಪ್ರಾಮಿಸ್ ಮಾಡಿಸಿ ಇಲ್ಲೊಬ್ಬ ಸೆಲೆಬ್ರಿಟಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಯಾರು ಆ ಸೆಲೆಬ್ರೆಟಿ ಅಂತೀರಾ? ಈ ಸ್ಟೋರಿ ಓದಿ.

ಮುಂಬೈ(ಎ.10): ಸೆಲೆಬ್ರೆಟಿಗಳು ಸಾರ್ವಜನಿಕರ ಬಳಿ ಮಾತಾಡುವುದೇ ಕಷ್ಟ. ಅಂತಹುದರಲ್ಲಿ ಹೆಲ್ಮೆಟ್ ಹಾಕದೇ ಪ್ರಯಾಣಿಸುತ್ತಿದ್ದ ತನ್ನ ಅಭಿಮಾನಿಗೆ, ಹೆಲ್ಮೆಟ್ ಪ್ರಾಮುಖ್ಯತೆ ಮತ್ತು ಜೀವದ ಮಹತ್ವ ತಿಳಿಸಿ, ಇನ್ಮುಂದೆ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತೇನೆ ಎಂದು ನನಗೆ ಪ್ರಾಮಿಸ್ ಮಾಡಿಸಿ ಇಲ್ಲೊಬ್ಬ ಸೆಲೆಬ್ರಿಟಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಯಾರು ಆ ಸೆಲೆಬ್ರೆಟಿ ಅಂತೀರಾ? ಈ ಸ್ಟೋರಿ ಓದಿ.

ಈ ಸಾಮಾಜಿಕ ಕಳಕಳಿ ಮೆರೆದ ಸೆಲೆಬ್ರೆಟಿ ಬೇರ್ಯಾರು ಅಲ್ಲಾ, ಅವ್ರೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಕೆಲ ಯುವಕರು ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುವುದನ್ನು ಕಂಡ ಮಾಸ್ಟರ್ ಬ್ಲಾಸ್ಟರ್ ಸಚಿನ್, ಆ ಯುವಕರಿಗೆ ರೋಡ್ ಸೇಫ್ಟಿ ಮತ್ತು ಜೀವದ ಪ್ರಾಮುಖ್ಯತೆ ಬಗ್ಗೆ ತಿಳಿ ಹೇಳಿದ್ದಾರೆ. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

ತಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಇಬ್ಬರು ಯುವಕರಿಗೆ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸುವುದು ಅಪಾಯಕಾರಿ. ಜೀವನ ತುಂಬಾ ಅಮೂಲ್ಯವಾದದ್ದು, ಮುಂದಿನ ಸಲ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುವೆ ಎಂದು ನನಗೆ ಪ್ರಾಮಿಸ್ ಮಾಡ್ತೀರಲ್ವಾ ಅಂತಾ ಸಚಿನ್ ಅವರ ಬಳಿ ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಈ ವೀಡಿಯೋವನ್ನು ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಸಚಿನ್, ರೋಡ್ ಸೇಫ್ಟಿ ಜೊತೆಗೆ ಜೀವಕ್ಕಿರುವ ಪ್ರಾಮುಖ್ಯತೆ ಬಗ್ಗೆ ಬರೆದುಕೊಂಡಿದ್ದಾರೆ. ರೋಡ್ ಸೇಫ್ಟಿ ಅನ್ನೋದು ಪ್ರತಿಯೊಬ್ಬರಿಗೂ ಮಹತ್ವವಾದದ್ದು. ಅದನ್ನು ಸರಿಯಾಗಿ ಪಾಲನೆ ಮಾಡಿ. ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

ಸಚಿನ್ ಕೇವಲ ಕ್ರಿಕೆಟ್ ದೇವರು ಮಾತ್ರವಲ್ಲ, ಶಿಕ್ಷಣ ಮತ್ತು ಅಭಿವೃದ್ಧಿ ಬಗ್ಗೆಯೂ ಕೂಡ ಅನೇಕ ಉತ್ತಮ ಕಾರ್ಯಗಳನ್ನು ಮಾಡಿ ಈಗಾಗಲೇ ಮಾದರಿ ವ್ಯಕ್ತಿ ಎನಿಸಿಕೊಂಡಿದ್ದಾರೆ. ತಾನೊಬ್ಬ ಸೆಲೆಬ್ರೆಟಿ ಅನ್ನೋ ಅಹಂ ಇಲ್ಲದೇ ಸಾರ್ವಜನಿಕರೊಡನೆ ತಾನು ಒಬ್ಬನಾಗಿ ಬೆರೆಯುತ್ತಾರೆ. ಇದೀಗ ಈ ಘಟನೆ ಅವರ ಗುಣಕ್ಕೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ.

click me!