ಫ್ರಾನ್ಸ್'ನ್ನು ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿದೆ ರಷ್ಯಾದ ಸ್ಯಾಟನ್-2 ಕ್ಷಿಪಣಿ

Published : Oct 27, 2016, 08:11 AM ISTUpdated : Apr 11, 2018, 01:09 PM IST
ಫ್ರಾನ್ಸ್'ನ್ನು ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿದೆ ರಷ್ಯಾದ ಸ್ಯಾಟನ್-2 ಕ್ಷಿಪಣಿ

ಸಾರಾಂಶ

ಪ್ರತೀ ಸೆಕೆಂಡ್‍ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರು ಈ ಸ್ಯಾಟನ್-2 ಕ್ಷಿಪಣಿ, 10 ಸಾವಿರ ಕಿ.ಮೀ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಲಿದೆಯಂತೆ. ತಾಂತ್ರಿಕವಾಗಿ ಸಾಕಷ್ಟು ಅತ್ಯಾಧುನಿಕವಾಗಿರುವ ಈ ಪ್ರಬಲ ಕ್ಷಿಪಣಿ ಶತ್ರುಪಾಳಯದ ಯಾವುದೇ ರೀತಿ ರಾಡಾರ್ ಗಳಿಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ  ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯಲ್ಲಿರುವ ರಹಸ್ಯ ತಂತ್ರಜ್ಞಾನ ಬಳಸಿಕೊಂಡು ಈ ಕಈ ಕಾರ್ಯಾಚರಣೆ ನಡೆಸಲಿದೆ. ಈ  ಕ್ಷಿಪಣಿ ಸ್ಫೋಟಿಸಿದರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ ಟೆಕ್ಸಾಸ್  ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ(ಅ.27):ಮೂರನೇ ಮಹಾಯುದ್ಧಕ್ಕೆ ರಷ್ಯಾ ಸಿದ್ಧತೆ ನಡೆಸಿದೆ ಅನ್ನೋ ಗುಸುಗುಸು ನಡುವೆಯೇ ನಡುವೆಯೇ ರಷ್ಯನ್ ಆರ್ಮಿ ಅತ್ಯಾಧುನಿಕ ಕ್ಷಿಪಣಿಯೊಂದರ ಪರೀಕ್ಷೆ ಮಾಡಿದೆ.ರಷ್ಯಾ ಬಳಿಯ ಇರುವ ಈ ಒಂದು ಕ್ಷಿಪಣಿ ಇಡೀ ಫ್ರಾನ್ಸ್ ದೇಶವನ್ನೇ ನಾಮಾವಶೇಷ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ರಷ್ಯಾದ ಈ ನಡೆ  ವಿಶ್ವದ ದೊಡ್ಡಣ್ಣ ಅಮೆರಿಕದ ನಿದ್ದೆಗೆಡಿಸಿದೆ.

ಥರ್ಮೋನ್ಯೂಕ್ಲಿಯರ್ ಖಂಡಾಂತರ  ಕ್ಷಿಪಣಿಯನ್ನು ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈ ನೂತನ ಕ್ಷಿಪಣಿಗೆ ರಷ್ಯಾ ಸೇನೆ ಸತಾನ್-2 ಅಂತ ಹೆಸರಿಟ್ಟಿದೆ. ಅಮೆರಿಕ ಸೇರಿದಂತೆ ಪ್ರಪಂಚದ  ಯಾವುದೇ ದೇಶದ ಪ್ರಬಲ ಕ್ಷಿಪಣಿಗಳಿಗಿಂತಲೂ ಇದು ಪ್ರಬಲ ಕ್ಷಿಪಣಿ ಎಂದು ಹೇಳಲಾಗುತ್ತಿದ್ದು,  ಒಂದೇ ಬಾರಿಗೆ 10 ಪರಮಾಣು ಬಾಂಬ್ ಗಳನ್ನು  ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಪ್ರತೀ ಸೆಕೆಂಡ್‍ಗೆ 7 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರು ಈ ಸ್ಯಾಟನ್-2 ಕ್ಷಿಪಣಿ, 10 ಸಾವಿರ ಕಿ.ಮೀ ದೂರದವರೆಗಿನ ಶತ್ರುಗಳ ನೆಲೆಯನ್ನು ಧ್ವಂಸಗೊಳಿಸಲಿದೆಯಂತೆ. ತಾಂತ್ರಿಕವಾಗಿ ಸಾಕಷ್ಟು ಅತ್ಯಾಧುನಿಕವಾಗಿರುವ ಈ ಪ್ರಬಲ ಕ್ಷಿಪಣಿ ಶತ್ರುಪಾಳಯದ ಯಾವುದೇ ರೀತಿ ರಾಡಾರ್ ಗಳಿಗೆ ಸಿಗದೇ ತನ್ನ ಗುರಿಯನ್ನು ಕ್ಷಣ ಮಾತ್ರದಲ್ಲಿ  ಧ್ವಂಸಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಷಿಪಣಿಯಲ್ಲಿರುವ ರಹಸ್ಯ ತಂತ್ರಜ್ಞಾನ ಬಳಸಿಕೊಂಡು ಈ ಕಈ ಕಾರ್ಯಾಚರಣೆ ನಡೆಸಲಿದೆ. ಈ  ಕ್ಷಿಪಣಿ ಸ್ಫೋಟಿಸಿದರೆ ಅಮೆರಿಕ ಎರಡನೇ ದೊಡ್ಡ ರಾಜ್ಯವಾಗಿರುವ ಟೆಕ್ಸಾಸ್  ಅಥವಾ ಇಡೀ ಫ್ರಾನ್ಸ್ ದೇಶವೇ ಸಂಪೂರ್ಣ ನಾಶವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಹಾಸ್ಟೆಲ್‌ ಊಟದಲ್ಲಿ ಹುಳ್ಳು: ತಟ್ಟೆ ಸಮೇತ ಡೀಸಿ ಕಚೇರಿಗೆ ಮಕ್ಕಳು!
ಕಾಂಗ್ರೆಸ್ಸಿಗರಿಗೆ ನರೇಗಾ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು: ಈರಣ್ಣ ಕಡಾಡಿ ವಾಗ್ದಾಳಿ