ಈರುಳ್ಳಿಗೆ ರೂ.100 ಅನುದಾನ

By isthiyakh -First Published Aug 31, 2016, 2:23 PM IST
Highlights

ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಈರುಳ್ಳಿಯ ಪ್ರತಿ ಕ್ವಿಂಟಲ್‌ಗೆ ರೂ.100 ಅನುದಾನ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಈರುಳ್ಳಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ಮಂಗಳವಾರ ಸಿಎಂ ದೇವೇಂದ್ರ ಫಡ್ನವೀಸ್‌ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ಜು.1ರಿಂದ ಆ.31 ರೊಳಗೆ ಎಪಿಎಂಸಿಯಲ್ಲಿ ಈರುಳ್ಳಿ ಮಾರಾಟ ಮಾಡಿದ ಎಲ್ಲ ರೈತರೂ ಅನುದಾನ ಪಡೆಯಬಹುದಾಗಿದೆ ಎಂದು ಫಡ್ನವೀಸ್‌ ಟ್ವೀಟ್‌ ಮಾಡಿದ್ದಾರೆ. ಆದರೆ, 1 ಕ್ವಿಂಟಲ್‌ ಈರುಳ್ಳಿ ಬೆಳೆಗೆ ರೈತರು .1250 ವಿನಿಯೋಗಿಸಿರುತ್ತಾರೆ. ಆದರೆ, ರೂ.100 ಅನುದಾನಕ್ಕೆ ಮುಂದಾಗಿದೆ ಎಂದು ಏಷ್ಯಾದ ಈರುಳ್ಳಿ ಮಾರುಕಟ್ಟೆಸಮಿತಿಯ ಅಧ್ಯಕ್ಷ ನಾನಾಸಾಹೇಬ್‌ ಪಾಟೀಲ್‌ ಅಸಮಾಧಾನ ವ್ಯರ್ತಪಡಿಸಿದ್ದಾರೆ.

click me!