ಮಾಹಿತಿ ಬಹಿರಂಗ, ಅತಿ ಹೆಚ್ಚಿನ ಕಪ್ಪುಹಣ ಇದ್ದಿದ್ದು ಇವರ ಬಳಿಯೆ!

By Web DeskFirst Published Oct 2, 2018, 4:24 PM IST
Highlights

ಕಾಳಧನವನ್ನು ಹೊರತೆಗೆಯಲು ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ ನಂತರದ ಬೆಳವಣಿಗೆಗಳು ನಮ್ಮೆಲ್ಲರಿಗೆ ಗೊತ್ತೆ ಇದೆ. ಕಾಳಧನ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾದರೆ ಯಾವ ರಾಜ್ಯದ ಜನರ ಬಳಿ ಕಪ್ಪು ಹಣ ಅತಿ ಹೆಚ್ಚಿನ ಪ್ರಮಾಣದಲ್ಲಿ ಶೇಖರೆಣೆಯಾಗಿತ್ತು? ಅದಕ್ಕೊಂದು ಉತ್ತರ ಎಂಬಂತಹ ವರದಿ ಇಲ್ಲಿದೆ.

ಅಹಮದಾಬಾದ್(ಅ.2 )  ಆದಾಯ ಘೋಷಣೆ ಯೋಜನೆ(ಐಡಿಎಸ್)ಯಡಿ ಗುಜರಾತಿಗಳು ನಾಲ್ಕು ತಿಂಗಳುಗಳಲ್ಲಿ  ಬರೋಬ್ಬರಿ 18,000 ಕೋಟಿ ರೂ. ಕಪ್ಪು ಹಣ ಘೋಷಣೆ ಮಾಡಿದ್ದಾರೆ.

ದೇಶಾದ್ಯಂತ ಬಹಿರಂಗಗೊಂಡ ಅಘೋಷಿತ ಕಪ್ಪುಹಣದಲ್ಲಿ ಮೋದಿ ತವರಿನ ಉದ್ಯಮಿಗಳ ಪಾಲು ಶೇ.29ರಷ್ಟು.  ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯೀಕರಣಗೊಳಿಸುವುದಕ್ಕೆ ಮುನ್ನ ಅಂದರೆ 2016ರ ಜೂನ್‍ನಿಂದ ಸೆಪ್ಟೆಂಬರ್ ಅವಧಿ ಅಂದರೆ ನಾಲ್ಕು ತಿಂಗಳಲ್ಲಿ ಗುಜರಾತಿಗಳು ಐಡಿಎಸ್ ಅಡಿ 18,000 ಕೋಟಿ ರೂ. ಕಪ್ಪು ಹಣ ತಮ್ಮ ಬಳಿ ಇದೆ ಎಂದು ಘೊಷಣೆ ಮಾಡಿಕೊಂಡಿರುವ ಸುದ್ದಿ ಸದ್ಯದ ಚರ್ಚೆಯ ವಸ್ತುವಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಭಾರತೀಶ್ ಝಾಲಾ ಎಂಬುವರು ಕೇಳಿದ್ದ ಮಾಹಿತಿಗೆ ಈ ಉತ್ತರ ಸಿಕ್ಕಿದೆ. ಒಟ್ಟು 65,250 ಕೋಟಿ ರೂ.ಗಳ ಮೊತ್ತದ ಕಾಳಧನ ಘೋಷಣೆಯಾಗಿದೆ.  ಇದರಲ್ಲಿ ಗುಜರಾತ್‍ನ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಶಾ ತಮ್ಮ 13,860 ಕೋಟಿ ರೂ.ಗಳ ಅಕ್ರಮ ಅದಾಯವನ್ನು ಘೋಷಿಸುವುದಕ್ಕೆ ಮುನ್ನವೇ ಗುಜರಾತ್‍ನಲ್ಲಿ 18 000 ಕೋಟಿ ರೂ. ಕಪ್ಪು ಹಣ ಘೋಷಣೆಯಾಗಿದೆ.


 

click me!