ಒಂದು ಮಾಹಿತಿ, 73,969 ಪೇಜ್, 1,47,938 ರೂ. ಫಾರ್ ಪ್ರಿಂಟೌಟ್!

By Web DeskFirst Published Sep 16, 2018, 9:46 AM IST
Highlights

ಆರ್ ಟಿಐ ಮಾಹಿತಿ ಕೋರಿ ಅರ್ಜಿ ಹಾಕಿದವರಿಗೆ ಶಾಕ್! ಮಾಹಿತಿ ನೀಡಲು ಬರೋಬ್ಬರಿ 1.49 ಲಕ್ಷ ರೂ. ಕೇಳಿದ ಪಾಲಿಕೆ! ಪ್ರಿಂಟೌಟ್ ಖರ್ಚು 1,47,938 ರೂ. ಎಂದ ಪಾಲಿಕೆ! ಮಾಹಿತಿಗಾಗಿ ಹಣ ಕೇಳಿದ ಉತ್ತರಾಖಂಡ್ ಹಲ್ದವಾನಿ ಪಾಲಿಕೆ ಅಧಿಕಾರಿಗಳು! ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಹೇಮಂತ್ ಗೌನಿಯಾ

ಡೆಹ್ರಾಡೂನ್(ಸೆ.16): ಸರ್ಕಾರಿ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತನೋರ್ವ ಸಲ್ಲಿಸಿದ್ದ ಅರ್ಜಿಗೆ, ಪಾಲಿಕೆ ಬರೋಬ್ಬರಿ 1.49 ಲಕ್ಷ ರೂ. ಪಾವತಿಸುವಂತೆ ಆಗ್ರಹಿಸಿದ ಘಟನೆ ಉತ್ತರಾಖಂಡ್ ನಲ್ಲಿ ನಡೆದಿದೆ.

ಇಲ್ಲಿನ ಹಲ್ದವಾನಿ ಪಾಲಿಕೆಗೆ ಮಾಹಿತಿ ಕೋರಿ ಆರ್ ಟಿಐ ಕಾರ್ಯಕರ್ತ ಹೇಮಂತ್ ಗೌನಿಯಾ ಅರ್ಜಿ ಸಲ್ಲಿಸಿದ್ದರು. ಈ ಮಾಹಿತಿ ನೀಡಲು ಬಹಳಷ್ಟು ಕಾಗದದ ಅವಶ್ಯಕತೆ ಇದ್ದು, ಪ್ರಿಂಟೌಟ್ ಖರ್ಚು ಭರಿಸಲು ಪಾಲಿಕೆ ಕೇಳಿದೆ. ಆದರೆ ಪ್ರಿಂಟೌಟ್ ಗಾಗಿ 1.49 ಲಕ್ಷ ರೂ.ಪಾವತಿಸುವಂತೆ ಕೇಳಿರುವುದು ಆಶ್ಚರ್ಯ ಮೂಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ತೆರಿಗೆ ಕಳ್ಳರು ಮತ್ತು ಅವರ ವಿರುದ್ದ ಕೈಗೊಳ್ಳಲಾದ ಕ್ರಮದ ಕುರಿತು ಮಾಹಿತಿ ನೀಡುವಂತೆ ಗೌನಿಯಾ ಆರ್ ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ನೀಡಲು ಹಿಂದೇಟು ಹಾಕಿರುವ ಪಾಲಿಕೆ, ಪ್ರಿಂಟೌಟ್ ಗಾಗಿ 1.49 ಲಕ್ಷ ರೂ. ಪಾವತಿಸುವಂತೆ ಕೇಳಿದೆ.

ಈ ಕುರಿತಾದ ಮಾಹಿತಿ ನೀಡಲು 73,969 ಕಾಗದದ ಅವಶ್ಯಕತೆ ಇದ್ದು, ಒಂದು ಪ್ರಿಂಟೌಟ್ ಗೆ 2 ರೂ. ದಂತೆ ಗೌನಿಯಾ 147,938 ರೂ. ಪಾವತಿಸುವಂತೆ ಪಾಲಿಕೆ ಆದೇಶ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೌನಿಯಾ, ತಾವು ಮಾಹಿತಿ ಪಡೆಯದಂತೆ ತಡೆಯಲು ಪಾಲಿಕೆ ಈ ನಟಕವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ ಗೌನಿಯಾ ಆರೋಪ ತಳ್ಳಿ ಹಾಕಿರುವ ಪಾಲಿಕೆ, ಸರ್ಕಾರದ ಆದೇಶದಂತೆ ಮಾಹಿತಿ ನೀಡಲು ಬೇಕಾದ ಕಾಗದದ ಖರ್ಚನ್ನು ಅರ್ಜಿದಾರರೇ ಭರಿಸಬೇಕಾಗಿದ್ದು, ಗೌನಿಯಾ ಈ ವೆಚ್ಛ ಭರಿಸಿದರೆ ಕೂಡಲೇ ಮಾಹಿತಿ ನೀಡುವುದಾಗಿ ಸ್ಪಷ್ಟಪಡಿಸಿದೆ.

click me!