
ವಿಜಯಪುರ(ಅ.12): ಭ್ರಷ್ಟರ ಅಕ್ರಮಗಳನ್ನ ಬಯಲಿಗೆಳೆಯುವವರಿಗೆ ಉಳಿಗಾಲವಿಲ್ಲ ಎಂಬಂತಾಗಿದೆ. ಭ್ರಚ್ಟರ ವಿರುದ್ಧ ಹೋರಾಟ ನಡೆಸೋರ ಜೀವಕ್ಕೂ ಭದ್ರತೆ ಇಲ್ಲ. ಇಂತಹವರ ವಿರುದ್ಧ ಅಧಿಕಾರಿ ವರ್ಗ, ಪ್ರಭಾವಿಗಳ ದರ್ಪ ಎಲ್ಲೆ ಮೀರಿದೆ.. ಇದಕ್ಕೆ ಸಾಕ್ಷಿ ಅನ್ನೋ ಹಾಗೆ ವಿಜಯಪುರದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಹೀಗೆ ಹಲ್ಲೆಗೊಳಗಾಗಿ ಆಸ್ಪತ್ರೆಯ ಪಾಲಾಗಿರುವ ವ್ಯಕ್ತಿ ಸುರೇಶ ಚವ್ಹಾನ್ , ವಿಜಯಪುರ ತಾಲೂಕಿನ ಭೂತನಾಳ ತಾಂಡಾದ ವಾಸಿ. ಸದ್ಯ ತಾನು ಜಿಲ್ಲಾಸ್ಪತ್ರೆ ಪಾಲಾಗಿರುವುದಕ್ಕೆ ವಿಜಯಪುರ ನಗರ ಶಾಸಕ ಕಾಂಗ್ರೆಸ್ಸಿನ ಡಾ ಮಕ್ಬೂಲ್ ಭಾಗವಾನ್ ಕಾರಣ ಅನ್ನೊದು ಈತನ ಆರೋಪ.
ಕಳೆದ 2014-15 ಹಾಗೂ16ನೇ ಸಾಲಿನಲ್ಲಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಜಪೇಯಿ ವಸತಿ ಯೋಜನೆ ಜಾರಿಯಾಗಿತ್ತು. ಇದರಲ್ಲಿ ನಡೆದಿದ್ದ ಭಾರೀ ಅಕ್ರಮದ ಬಗ್ಗೆ ಸುರೇಶ ಚವ್ಹಾನ್ ಆರ್ಟಿಐ ಮೂಲಕ ಬಯಲಿಗೆಳೆದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಕೂಡ ನಡೆಸಲು ಆದೇಶಿಸಿದ್ರು. ಇಷ್ಟಕ್ಕೆ ಶಾಸಕ ಡಾ. ಮಕ್ಬೂಲ್ ಭಗವಾನ್ ಬೆಂಬಲಿಗರು ತೀವ್ರ ಹಲ್ಲೆ ನಡೆಸಿದ್ದಾರಂತೆ.
ಇನ್ನು ವಸತಿ ಯೋಜನೆ ಸಮಿತಿಯ ಅಧ್ಯಕ್ಷ ನಗರ ಶಾಸಕರೇ ಆಗಿರೋದ್ರಿಂದ, ಈ ಎಲ್ಲಾ ಅವ್ಯವಹಾರದಲ್ಲಿಯೂ ಡಾ. ಮಕ್ಬೂಲ್ ಭಗವಾನ್ ಕೈವಾಡ ಇರೋದ್ರಲ್ಲಿ ಅನುಮಾನವಿಲ್ಲ.. ಹೀಗಾಗಿ ಅಕ್ರಮ ಬಯಲಾಗುವ ಆತಂಕದಿಂದ ಮೊನ್ನೆ ರಾತ್ರಿ ಅಪರಿಚಿತ ತಂಡವೊಂದು ಸುರೇಶ್ ಚವ್ಹಾಣ್ ಮೇಲೆ ಹಲ್ಲೆ ನಡೆಸಿದೆ. ಜತೆಗೆ ಸಹಾಯಕ್ಕೆ ಬಂದ ಸಂಬಂಧಿಕರ ಮೇಲು ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಸುರೇಶ್ ದೂರು ನೀಡಿದ್ದಾರೆ. ಒಟ್ಟಾರೆ ನಗರ ಕ್ಷೇತ್ರ ಭಾಗದಲ್ಲಿನ ವಾಜಪೇಯಿ ವಸತಿ ಯೋಜನೆಯ ಅಕ್ರಮ, ಶಾಸಕರ ಮನೆಯ ಬಾಗಿಲವರೆಗೂ ಬಂದು ನಿಂತಿದೆ. ಜಿಲ್ಲಾಡಳಿತದ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರ ಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.