ಬಾಲಿವುಡ್ ನಲ್ಲಿ ಹೆಚ್ಚುತ್ತಿವೆ ಇಂತಹ ಚಿತ್ರಗಳು

Published : Jul 13, 2018, 10:00 AM IST
ಬಾಲಿವುಡ್ ನಲ್ಲಿ ಹೆಚ್ಚುತ್ತಿವೆ ಇಂತಹ ಚಿತ್ರಗಳು

ಸಾರಾಂಶ

ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನಾಧಾರಿತ ‘ಸಂಜು’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗಿದೆ. ಋುಣಾತ್ಮಕ ವ್ಯಕ್ತಿತ್ವಗಳನ್ನು ವೈಭವೀಕರಿಸುವ ಚಿತ್ರಗಳು ಹೆಚ್ಚುತ್ತಿರುವುದಕ್ಕೆ ಆರೆಸ್ಸೆಸ್‌ ಕಳವಳ ವ್ಯಕ್ತಪಡಿಸಿದೆ. 

ನವದೆಹಲಿ: ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನಾಧಾರಿತ ‘ಸಂಜು’ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗಿದೆ. 

ಆದರೆ, ಇಂತಹ ಋುಣಾತ್ಮಕ ವ್ಯಕ್ತಿತ್ವಗಳನ್ನು ವೈಭವೀಕರಿಸುವ ಚಿತ್ರಗಳು ಹೆಚ್ಚುತ್ತಿರುವುದಕ್ಕೆ ಆರೆಸ್ಸೆಸ್‌ ಕಳವಳ ವ್ಯಕ್ತಪಡಿಸಿದೆ. ಆರೆಸ್ಸೆಸ್‌ ಮುಖವಾಣಿ ‘ಪಾಂಚಜನ್ಯ’ದ ಮುಖಪುಟದಲ್ಲಿ ‘ಕಿರ್ದಾರ್‌, ದಾಗ್‌ದಾರ್‌’ ಎಂಬ ತಲೆಬರಹದಡಿ ಲೇಖನ ಪ್ರಕಟವಾಗಿದೆ. 

ಇಂತಹ ಚಿತ್ರಗಳು ಹೆಚ್ಚುತ್ತಿರುವ ಹಿಂದೆ ಗಲ್ಫ್  ಹಣವಿದೆಯೇ? ಮುಸ್ಲಿಂ ನಿರ್ಮಾಪಕರ ಗೌಪ್ಯ ಪ್ರಾಬಲ್ಯವಿದೆಯೇ? ಎಂದು ಜನರು ಪ್ರಶ್ನಿಸುತ್ತಿರುವುದಾಗಿ ಲೇಖನದಲ್ಲಿ ಉಲ್ಲೇಖಿಸಲಾಗಿದೆ

ರಣಬೀರ್‌ ಮತ್ತು ಶಾರುಖ್‌ ನಟನೆಯ ಸಂಜು, ರಯೀಸ್‌ನಂತಹ ಚಿತ್ರಗಳ ಹಿಂದೆ ಭೂಗತ ಲೋಕದ ‘ಸಂಚು’ ಇದೆಯೇ? ಎಂದು ಪ್ರಶ್ನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ