ದೇಶದಲ್ಲಿ 65,250 ಸಾವಿರ ಕೋಟಿ ರೂ. ಕಪ್ಪು ಹಣ ಬಹಿರಂಗ

By Internet DeskFirst Published Oct 1, 2016, 1:32 PM IST
Highlights

ನವದೆಹಲಿ(ಅ.1): ಕೇಂದ್ರ ಸರ್ಕಾರದ ಆದಾಯ ತೆರಿಗೆ ಬಹಿರಂಗ ಯೋಜನೆಯಡಿ ಕಳೆದ 4 ತಿಂಗಳಿಂದ ಸೆಪ್ಟೆಂಬರ್ 30ರವರೆಗೆ  ದೇಶದಲ್ಲಿ 65,250 ಕೋಟಿ ರೂ. ಕಪ್ಪು ಹಣವನ್ನು ಬಹಿರಂಗಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ತಿಳಿಸಿದ್ದಾರೆ.

ತೆರಿಗೆದಾರರು ಬಹಿರಂಗಗೊಳಿಸಿರುವ 65,250 ಕೋಟಿ ರೂ. ಕಪ್ಪು ಹಣವನ್ನು ಆನ್'ಲೈನ್, ಮ್ಯಾನುಯಲ್ ಮೂಲಕ ಘೋಷಿಸಿಕೊಂಡಿದ್ದಾರೆ.ಈ ಹಣದಲ್ಲಿ ಶೇ.45 ರಷ್ಟು ಅಂದರೆ 29 ಸಾವಿರ ಕೋಟಿ ರೂ. ಹಣ ತೆರಿಗೆ ಹಾಗೂ ದಂಡದ ಮೂಲಕ ಸ್ವೀಕರಿಸಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರವು ಕಪ್ಪು ಹಣ ಹೊಂದಿರುವ, ತೆರಿಗೆ ವಂಚಕರಿಗೆ ಏಕ ಕಾಲದ ಅವಕಾಶ ನೀಡುವ ಆದಾಯ ತೆರಿಗೆ ಬಹಿರಂಗ ಯೋಜನೆಯನ್ನು ಈ ಮೊದಲು 1997ರಲ್ಲಿ ಜಾರಿಗೊಳಿಸಲಾಗಿದ್ದು 9,760 ಕೋಟಿ ಸಂಗ್ರಹಿಸಲಾಗಿತ್ತು.ಸರಾಸರಿ 7 ಲಕ್ಷ ರೂ. ಹಣ ನಿಗದಿಪಡಿಸಲಾಗಿತ್ತು' ಎಂದು ಜೈಟ್ಲಿ  ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

 

click me!