
ಮುಂಬೈ(ಮೇ.06): ಹೆಚ್ಚುವರಿ ಬೇಡಿಕೆಯ ಹಿನ್ನಲೆಯಲ್ಲಿ ನಿತ್ಯ 500 ರೂ.ಮೌಲ್ಯದ ನೋಟುಗಳನ್ನು 3 ಸಾವಿರ ಕೋಟಿ ರೂ ಮುದ್ರಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಸುಭಾಶ್ ಚಂದ್ರ ಗಾರ್ಗ್ ತಿಳಿಸಿದ್ದಾರೆ.
ನಗದು ಬೇಡಿಕೆಗೆ ಯಾವುದೇ ರೀತಿಯ ತುರ್ತು ಎದುರಾಗದೆ ಸಾಕಷ್ಟು ನೋಟುಗಳು ಲಭ್ಯವಿದ್ದು ಬೇಡಿಕೆಯ ಆಧಾರದ ಮೇಲೆ ಮುದ್ರಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರದಲ್ಲಿನ ಅಸಮಾನತೆಯ ಏರಿಕೆ ಅಥವಾ ಮತ್ಯಾವುದೇ ತೊಂದರೆ ಸಂಭವಿಸಿಲ್ಲ. ಕಳೆದ ವಾರ ಎಟಿಎಂನಲ್ಲಿ ನಗದು ಸಮಸ್ಯೆಗೆ ಉತ್ತರಿಸಿದ ಅವರು ಶೇ.85 ಪರಿಸ್ಥಿತಿ ಉತ್ತಮವಾಗಿತ್ತು. ಪ್ರಸ್ತುತ ಕೂಡ ಆರಾಮದಾಯಕವಾಗಿದೆ 'ಎಂದರು.
2 ಸಾವಿರ ಮೌಲ್ಯದ ನೋಟು 7 ಲಕ್ಷ ಕೋಟಿ ರೂ. ಪ್ರಸರಣೆಯಾಗುತ್ತಿದೆ. ಈ ನೋಟುಗಳಿಗೆ ಅಗತ್ಯತೆ ಹೆಚ್ಚಿದ್ದರೂ ಹೊಸ ನೋಟುಗಳನ್ನು ಮುದ್ರಿಸಲಾಗುತ್ತಿಲ್ಲ. ಜನಸಾಮಾನ್ಯರು 500, 200 ಹಾಗೂ 100 ರೂ.ಗಳ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ನಕಲಿ ನೋಟುಗಳ ಬಗ್ಗೆ ಆರ್'ಬಿಐ ಹೆಚ್ಚು ಜಾಗ್ರತೆ ವಹಿಸಿದ್ದು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಳೆ ಎರಡೂವರೆ ವರ್ಷಗಳಲ್ಲಿ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಸಾಕಷ್ಟು ಕಡಿಮೆಯಾಗಿದೆ' ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.