ಉಗ್ರ ಸಂಘಟನೆ ಸೇರಿ 36 ಗಂಟೆಯೊಳಗೆ ಪ್ರೊಫೆಸರ್ ಎನ್ಕೌಂಟರ್..!

First Published May 6, 2018, 3:40 PM IST
Highlights

ಕಾಶ್ಮೀರ ವಿಶ್ವವಿದ್ಯಾಲಯದ ಮೊಹಮ್ಮದ್ ರಫಿ ಭಟ್ ಶುಕ್ರವಾರ ಮಧ್ಯಾಹ್ನವಷ್ಟೇ ಉಗ್ರಸಂಘಟನೆ ಸೇರಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಶನಿವಾರ ರಾತ್ರಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಭಟ್’ರನ್ನು ಹೊಡೆದುರುಳಿಸಿದ್ದಾರೆ.

ಶ್ರೀನಗರ[ಮೇ.06]: ಕಣಿವೆ ರಾಜ್ಯದಲ್ಲಿ ಗುಂಡಿನ ಮೊರೆತ ಜೋರಾಗಿದ್ದು, ಶೋಪಿಯಾನ್’ನಲ್ಲಿ ಭದ್ರತಾಪಡೆಗಳು ನಡೆಸಿದ ಎನ್ಕೌಂಟರ್’ನಲ್ಲಿ ಕಾಶ್ಮೀರ ವಿವಿ ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ.
ಕಾಶ್ಮೀರ ವಿಶ್ವವಿದ್ಯಾಲಯದ ಮೊಹಮ್ಮದ್ ರಫಿ ಭಟ್ ಶುಕ್ರವಾರ ಮಧ್ಯಾಹ್ನವಷ್ಟೇ ಉಗ್ರಸಂಘಟನೆ ಸೇರಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಶನಿವಾರ ರಾತ್ರಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಭಟ್’ರನ್ನು ಹೊಡೆದುರುಳಿಸಿದ್ದಾರೆ. 2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕೆಲವು ಯುವಕರು ಉಗ್ರಸಂಘಟನೆ ಸೇರಿದ್ದರು. ಅವರಲ್ಲಿ ಕೆಲವರು ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ ಎನ್ನಲಾಗಿದೆ.
ಶನಿವಾರ ಮುಂಜಾನೆಯೇ ಭಟ್ ಕುಟುಂಬಸ್ಥರು ಆತ ನಾಪತ್ತೆಯಾಗಿರುವುದನ್ನು ಖಚಿತ ಪಡಿಸಿದ್ದರು. ಕಾಶ್ಮೀರ ವಿವಿ ಉಪಕುಲಪತಿ ಡಿಜಿಪಿಗೆ ಪತ್ರ ಬರೆದು ಭಟ್’ರನ್ನು ಹುಡಕಿಕೊಡುವಂತೆ ಮನವಿ ಮಾಡಿದ್ದರು. ದಕ್ಷಿಣ ಕಾಶ್ಮೀರದ ಬಡಿಗಾಮ್ ಗ್ರಾಮದ ಜೈನಾಪುರ ಭಾಗದಲ್ಲಿ ಉಗ್ರ ಸಂಘಟನೆಗಳ ಜತೆ ಮೊಹಮ್ಮದ್ ರಫಿ ಭಟ್ ಇರುವುದನ್ನು ಖಚಿತ ಪಡಿಸಿಕೊಂಡ ಭದ್ರತಾಪಡೆಗಳು ಆತನನ್ನು ಶರಣಾಗಲು ಕೇಳಿಕೊಂಡವು. ಶರಣಾಗಲು ಒಪ್ಪದಿದ್ದಾಗ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆತಂದು ಶರಣಾಗತಿಯಾಗಲು ಮನವಿ ಮಾಡಿಕೊಳ್ಳಲಾಗಿದೆ. ಆದರೂ ಒಪ್ಪದಿದ್ದಾಗ ಎನ್ಕೌಂಟರ್ ನಡೆಸಲಾಯಿತು ಎಂದು ಐಜಿಪಿ ಎಸ್.ಪಿ ಪನಿ ತಿಳಿದ್ದಾರೆ.

click me!