
ಹಾಸನ : ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ತನಿಖೆಗೆ ಚುನಾವಣಾ ಆಯೋಗ ಆದೇಶ ನೀಡಿದ ಹಿನ್ನೆಲೆಯಲ್ಲಿ, ಸಚಿವ ಎ.ಮಂಜು-ಡಿಸಿ ರೋಹಿಣಿ ನಡುವೆ ಪತ್ರ ಸಮರ ಮುಂದುವರಿದಿದೆ.
ಈ ಬಗ್ಗೆ ಮಾಹಿತಿ ಕೇಳಿದ್ದ ಪ್ರಾದೇಶಿಕ ಆಯುಕ್ತರಿಗೆ 3 ಪುಟಗಳಲ್ಲಿ ಜಿಲ್ಲಾಧಿಕಾರಿ ಉತ್ತರ ನೀಡಿದ್ದಾರೆ. ಸಚಿವರು ಸರ್ಕಾರಿ ಕಚೇರಿ ಬಳಕೆ ಹಾಗೂ ಬಗರ್ ಹುಕುಂ ಅಕ್ರಮದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಪ್ರಾದೇಶಿಕ ಆಯುಕ್ತರ ಎಲ್ಲಾ ಪ್ರಶ್ನೆಗೆ ದಾಖಲೆ ಪತ್ರ, ವಿಡಿಯೋ ಸಹಿತ ಉತ್ತರ ನೀಡಿದ್ದಾರೆ.
ಬಗರ್ ಹುಕುಂ ಸಾಗುವಳಿ ಯೋಜನೆಯಡಿ 1093 ಅರ್ಜಿಯನ್ನು ಹಳೇ ದಿನಾಂಕಕ್ಕೆ ವಿಲೇವಾರಿ ಮಾಡಿದ್ದಾರೆಂದು ಸಚಿವರ ವಿರುದ್ದ ಪತ್ರದಲ್ಲಿ ಉಲ್ಲೇಖ ಮಾಡಿದ್ದ ಬಗ್ಗೆ ಡಿಸಿ ವಿರುದ್ಧ ಸಚಿವ ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಝಾ ತನಿಖೆಗೆ ಆದೇಶ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.