ಚೆನ್ನೈನಲ್ಲಿನ ಯು.ಎಸ್. ಕಾನ್ಸಲ್ ಜನರಲ್ ಆಗಿ ರಾಬರ್ಟ್ ಬರ್ಜಸ್ ಅಧಿಕಾರ ಸ್ವೀಕಾರ

Published : Aug 08, 2017, 02:59 PM ISTUpdated : Apr 11, 2018, 12:46 PM IST
ಚೆನ್ನೈನಲ್ಲಿನ ಯು.ಎಸ್. ಕಾನ್ಸಲ್ ಜನರಲ್ ಆಗಿ ರಾಬರ್ಟ್ ಬರ್ಜಸ್ ಅಧಿಕಾರ ಸ್ವೀಕಾರ

ಸಾರಾಂಶ

ಚೆನ್ನೈನಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್‌ ಜನರಲ್‌ ಆಗಿ ಅಧಿಕಾರ ಸ್ವೀಕರಿಸುವ ಮುನ್ನ ವಾಷಿಂಗ್ಟನ್‌ ಡಿಸಿಯಲ್ಲಿ ಡಿಪಾರ್ಟ್‌'ಮೆಂಟ್‌ ಆಫ್‌ ಸ್ಟೇಟ್‌'ನ ಬ್ಯೂರೋ ಆಫ್‌ ಸೌತ್‌ ಅಂಡ್‌ ಸೆಂಟ್ರಲ್‌ ಏಷ್ಯನ್‌ ಅಫೇರ್ಸ್‌'ನಲ್ಲಿ ನಿರ್ದೇಶಕರಾಗಿದ್ದರು. ಅದಕ್ಕಿಂತ ಮೊದಲು ತಜಕಿಸ್ತಾನದ ದುಶಾಂಬೆಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಡೆಪ್ಯುಟಿ ಛೀಫ್‌ ಆಫ್‌ ಮಿಶನ್ ಆಗಿ ಕಾರ್ಯನಿರ್ವಹಿಸಿದ್ದರು. ಬಿಶ್ಕೆಕ್‌, ಕಿರ್ಜಿಸ್ತಾನ್‌, ಬಾಕು, ಅಜರ್ಬೈಜಾನ್‌, ಲಿಲೊನ್‌'ಗ್ವೆ, ಮಲಾವಿ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ರಾಜತಾಂತ್ರಿಕರಾಗಿ ದುಡಿದ ಅನುಭವ ಬರ್ಜಸ್ ಅವರಿಗಿದೆ. ರಾಜತಾಂತ್ರಿಕರಾಗುವ ಮುನ್ನ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ಚೆನ್ನೈ: ಚೆನ್ನೈನಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್‌ ಜನರಲ್‌ ಆಗಿ ರಾಬರ್ಟ್‌ ಬರ್ಜಸ್ ನಿನ್ನೆ ಆ. 7 ರಂದು ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, “ಅಮೆರಿಕ- ಭಾರತದ ನಡುವಿನ ಸಂಬಂಧ ಇತಿಹಾಸದ ಮಹತ್ತರ ಘಟ್ಟದಲ್ಲಿರುವ ಹೊತ್ತಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುವ ಸುಯೋಗ ನನ್ನದು.” ಎಂದು ಹೇಳಿದರು.

“ಮುಂಬರುವ ದಿನಗಳಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳ ಬಗ್ಗೆ ತಿಳಿದುಕೊಳ್ಳಲು ಹಾಗು ಉಭಯತ್ರರ ಧ್ಯೇಯೋದ್ದೇಶಗಳ ಧ್ಯೇಯೋದ್ದೇಶಗಳ ಮುಂದುವರಿಕೆಗೆ ಉತ್ಸುಕನಾಗಿದ್ದೇನೆ,” ಎಂದರು.

ಚೆನ್ನೈನಲ್ಲಿನ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್‌ ಜನರಲ್‌ ಆಗಿ ಅಧಿಕಾರ ಸ್ವೀಕರಿಸುವ ಮುನ್ನ ವಾಷಿಂಗ್ಟನ್‌ ಡಿಸಿಯಲ್ಲಿ ಡಿಪಾರ್ಟ್‌'ಮೆಂಟ್‌ ಆಫ್‌ ಸ್ಟೇಟ್‌'ನ ಬ್ಯೂರೋ ಆಫ್‌ ಸೌತ್‌ ಅಂಡ್‌ ಸೆಂಟ್ರಲ್‌ ಏಷ್ಯನ್‌ ಅಫೇರ್ಸ್‌'ನಲ್ಲಿ ನಿರ್ದೇಶಕರಾಗಿದ್ದರು. ಅದಕ್ಕಿಂತ ಮೊದಲು ತಜಕಿಸ್ತಾನದ ದುಶಾಂಬೆಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಡೆಪ್ಯುಟಿ ಛೀಫ್‌ ಆಫ್‌ ಮಿಶನ್ ಆಗಿ ಕಾರ್ಯನಿರ್ವಹಿಸಿದ್ದರು. ಬಿಶ್ಕೆಕ್‌, ಕಿರ್ಜಿಸ್ತಾನ್‌, ಬಾಕು, ಅಜರ್ಬೈಜಾನ್‌, ಲಿಲೊನ್‌'ಗ್ವೆ, ಮಲಾವಿ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ರಾಜತಾಂತ್ರಿಕರಾಗಿ ದುಡಿದ ಅನುಭವ ಬರ್ಜಸ್ ಅವರಿಗಿದೆ. ರಾಜತಾಂತ್ರಿಕರಾಗುವ ಮುನ್ನ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ಕಾನ್ಸಲ್‌ ಜನರಲ್‌ ಬರ್ಗಿಸ್‌ ಅವರು ಇಲಿನಾಯ್ಸ್‌ನ ವೌಕೆಗಾನ್‌ ಮೂಲದವರು. ಕೊಲರಾಡೊ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹಾಸ್ಟಿಂಗ್ಸ್‌ ಕಾಲೇಜ್‌ ಆಫ್‌ ದ ಲಾ ದಿಂದ ಜ್ಯೂರಿಸ್‌ ಡಾಕ್ಟರ್‌ ಡಿಗ್ರಿಯನ್ನೂ ಪಡೆದಿದ್ದಾರೆ. ಟೆಕ್ಸಾಸ್‌ ವಿವಿಯ ಆಸ್ಟಿನ್‌ ನಿಂದ ಎಂಬಿಎ ಪಡೆದಿದ್ದಾರೆ. ಯು.ಎಸ್‌. ನ್ಯಾಷನಲ್‌ ವಾರ್‌ ಕಾಲೇಜಿನಿಂದ 2012 ರಲ್ಲಿ ನ್ಯಾಷನಲ್‌ ಸೆಕ್ಯುರಿಟಿ ಸ್ಟ್ರಾಟಜಿಯಲ್ಲಿ, ಮಾಸ್ಟರ್‌ ಇನ್‌ ಸೈನ್ಸ್‌ ಪದವಿ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ 2025-26 ವೇಳಾಪಟ್ಟಿ, ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ
ಬೈಕ್ ರೈಡಿಂಗ್‌ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ವಿಡಿಯೋ ವೈರಲ್