ಮುಂಬೈ ಬೀದಿಯಲ್ಲಿತ್ತು 10 ಕೋಟಿ ಕಪ್ಪುಹಣ !

By Web DeskFirst Published Oct 2, 2016, 11:33 AM IST
Highlights

ಮುಂಬೈ(ಅ.2): ಸಾಮಾನ್ಯವಾಗಿ ಬೀದಿ ಬದಿಯ ವ್ಯಾಪಾರಿಗಳನ್ನು ಬಡವರು ಅಂದುಕೊಳ್ಳುತ್ತೇವೆ. ಆದರೆ ಮುಂಬೈಯಲ್ಲಿ ಬೀದಿ ಬದಿಯಲ್ಲಿ ಆಹಾರ ತಿನಿಸುಗಳನ್ನು ಮಾರಾಟ ಮಾಡುವವರು ಲಕ್ಷಾಧೀಶರಲ್ಲ ಕೋಟ್ಯಾಧಿಪತಿಗಳು ಎಂದರೇ ನೀವು ನಂಬಲೇಬೇಕು.  ಮುಂಬೈ ನಗರದ ಬೀದಿ ಬದಿಯ ತಿನಿಸುಗಳ ವ್ಯಾಪಾರಿಗಳು 50 ಕೋಟಿ ರೂಪಾಯಿ  ತೆರಿಗೆ ಕಟ್ಟಿರೋದು  ತಡವಾಗಿ ಬೆಳಕಿಗೆ ಬಂದಿದೆ.

ಸ್ವತಃ ಸರ್ಕಾರದ ಆದಾಯ ಘೋಷಣೆ ಯೋಜನೆಯಲ್ಲಿ  ವ್ಯಾಪಾರಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶಾದ್ಯಂತ ದಾಳಿ ನಡೆಸಿದ ಬೆನ್ನಲ್ಲೆ ಮುಂಬೈನ ಬೀದಿ ಬದಿಯಲ್ಲಿ  ಆಹಾರ ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಆದಾಯ ಘೋಷಿಸಿದ್ದಾರೆ. ಘಟ್ಕೋಪರ್ ನ ಜ್ಯೂಸ್ ಸೆಂಟರ್ ನ ಮಾಲೀಕರೊಬ್ಬರು 5 ಕೋಟಿ ಘೋಷಿಸಿದರೆ, ಹೆಸರನ್ನು ಹೇಳಲು ಬಯಸದ ಅದೇಷ್ಟೋ ವ್ಯಾಪಾರಿಗಳು ಸುಮಾರು 25 ಲಕ್ಷದಿಂದ 2 ಕೋಟಿಯವರೆಗೂ  ಆದಾಯ ಘೋಷಿಸಿದ್ದಾರೆ. ನಿನ್ನೆಯಷ್ಟೆ ದೇಶದ ನಾನಾ ಭಾಗಗಳಿಂದ ಸುಮಾರು 65,250 ಕೋಟಿ  ಕಪ್ಪು ಹಣ ಹೊರಬಂದಿತ್ತು.

click me!